ADVERTISEMENT

Share Market | ಷೇರು ಸೂಚ್ಯಂಕ ಇಳಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 13:38 IST
Last Updated 28 ಜೂನ್ 2024, 13:38 IST
ಸೆನ್ಸೆಕ್ಸ್‌
ಸೆನ್ಸೆಕ್ಸ್‌   

ಮುಂಬೈ: ಸತತ ನಾಲ್ಕು ವಹಿವಾಟು ದಿನಗಳಿಂದ ಏರಿಕೆ ಕಂಡಿದ್ದ ಷೇರು ಸೂಚ್ಯಂಕಗಳು, ಬ್ಯಾಂಕಿಂಗ್‌, ಹಣಕಾಸು ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಶುಕ್ರವಾರ ಇಳಿಕೆ ಕಂಡಿವೆ.

ಲಾಭದ ಗಳಿಕೆಗೆ ಹೂಡಿಕೆದಾರರು ಮುಂದಾಗಿದ್ದು ಸಹ ಸೂಚ್ಯಂಕಗಳ ಇಳಿಕೆಗೆ ಕಾರಣವಾಯಿತು.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 210 ಅಂಶ ಇಳಿಕೆ ಕಂಡು 79,032ಕ್ಕೆ ಅಂತ್ಯಗೊಂಡಿತು. ದಿನದ ವಹಿವಾಟಿನಲ್ಲಿ 428 ಅಂಶ ಏರಿಕೆಯಾಗಿತ್ತು. 

ADVERTISEMENT

ರಾಷ್ಟ್ರೀಯ ಷೇರು‍ಪೇಟೆ ಸೂಚ್ಯಂಕ (ಎನ್‌ಎಸ್‌ಇ) 33 ಅಂಶ ಕಡಿಮೆಯಾಗಿ 24,010ಕ್ಕೆ ಸ್ಥಿರಗೊಂಡಿತು. ವಹಿವಾಟಿನ ವೇಳೆ 129 ಅಂಶ ಹೆಚ್ಚಳವಾಗಿತ್ತು. 

ಇಂಡಸ್‌ಇಂಡ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಕೋಟಕ್‌ ಮಹೀಂದ್ರಾ ‌ಬ್ಯಾಂಕ್‌, ಮಾರುತಿ, ಜೆಎಸ್‌ಡಬ್ಲ್ಯು ಸ್ಟೀಲ್‌ ಮತ್ತು ಬಜಾಜ್‌ ಫಿನ್‌ಸರ್ವ್‌ ಷೇರಿನ ಮೌಲ್ಯ ಇಳಿದಿವೆ.

ರಿಲಯನ್ಸ್‌ ಇಂಡಸ್ಟ್ರೀಸ್‌, ಟಾಟಾ ಮೋಟರ್ಸ್‌, ಏಷ್ಯನ್‌ ಪೇಂಟ್ಸ್‌, ನೆಸ್ಲೆ ಮತ್ತು ಟೈಟನ್‌ ಷೇರು ಮೌಲ್ಯ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.