ADVERTISEMENT

ಸೆನ್ಸೆಕ್ಸ್‌ 800,ನಿಫ್ಟಿ 200 ಅಂಶ ಕುಸಿತ: ಹೂಡಿಕೆದಾರರಿಗೆ ₹16 ಲಕ್ಷ ಕೋಟಿ ನಷ್ಟ

ಪಿಟಿಐ
Published 4 ಅಕ್ಟೋಬರ್ 2024, 14:28 IST
Last Updated 4 ಅಕ್ಟೋಬರ್ 2024, 14:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ದೇಶದ ಷೇರುಪೇಟೆಯಲ್ಲಿ ಶುಕ್ರವಾರವೂ ಕರಡಿ ಕುಣಿತ ಮುಂದುವರಿಯಿತು. ಮುಂಬೈ ಷೇರು‍ಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಶೇ 1ರಷ್ಟು ಕುಸಿತ ಕಂಡಿವೆ. 

ಎಫ್‌ಎಂಸಿಜಿ, ಆಟೊ ಮತ್ತು ಎನರ್ಜಿ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು. ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳದಿಂದಾಗಿ ಸೂಚ್ಯಂಕಗಳು ಕುಸಿತದ ಹಾದಿ ಹಿಡಿದವು. 

ಸತತ ಐದು ದಿನದ ವಹಿವಾಟಿನಲ್ಲಿ ಸೂಚ್ಯಂಕಗಳ ಕುಸಿತದಿಂದ ಹೂಡಿಕೆದಾರರ ಸಂಪತ್ತು ₹16 ಲಕ್ಷ ಕೋಟಿ ಕರಗಿದೆ.

ADVERTISEMENT

ಸೆನ್ಸೆಕ್ಸ್‌ 808 ಅಂಶ ಇಳಿಕೆ (ಶೇ 0.98ರಷ್ಟು) ಕಂಡು, 81,688 ಅಂಶಗಳಲ್ಲಿ ಸ್ಥಿರಗೊಂಡಿತು. ನಿಫ್ಟಿ 200 ಅಂಶ ಕುಸಿತ ಕಂಡು (ಶೇ 0.79ರಷ್ಟು) 25,049 ಅಂಶಗಳಲ್ಲಿ ಮುಕ್ತಾಯಗೊಂಡಿತು. 

ಸೆನ್ಸೆಕ್ಸ್‌ ಗುಚ್ಛದಲ್ಲಿನ ಮಹೀಂದ್ರ ಆ್ಯಂಡ್‌ ಮಹೀಂದ್ರ, ಬಜಾಜ್‌ ಫೈನಾನ್ಸ್‌, ಏಷ್ಯನ್‌ ಪೇಂಟ್ಸ್‌, ನೆಸ್ಲೆ, ಭಾರ್ತಿ ಏರ್‌ಟೆಲ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಎಚ್‌ಯುಎಲ್‌, ಐಟಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

ಇನ್ಫೊಸಿಸ್‌, ಟೆಕ್‌ ಮಹೀಂದ್ರ, ಟಾಟಾ ಮೋಟರ್ಸ್, ಎಕ್ಸಿಸ್‌ ಬ್ಯಾಂಕ್‌, ಟಿಸಿಎಸ್‌ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಷೇರಿನ ಮೌಲ್ಯದಲ್ಲಿ ಹೆಚ್ಚಳವಾಗಿದೆ. 

ಗುರುವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ₹15,243 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಕಳೆದ ಮೂರು ದಿನದ ವಹಿವಾಟಿನಲ್ಲಿ ₹30,614 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.