ADVERTISEMENT

ಷೇರುಪೇಟೆ: ಸೆನ್ಸೆಕ್ಸ್, ನಿಫ್ಟಿ ಮತ್ತೆ ಕುಸಿತ

ಪಿಟಿಐ
Published 14 ನವೆಂಬರ್ 2024, 12:32 IST
Last Updated 14 ನವೆಂಬರ್ 2024, 12:32 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ದೇಶೀಯ ಷೇರು ಸೂಚ್ಯಂಕಗಳ ಕುಸಿತ ಮುಂದುವರಿದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂತೆಗೆದುಕೊಳ್ಳುತ್ತಿರುವುದು ಮತ್ತು ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರ ಏರಿಕೆಯ ಪರಿಣಾಮ ಷೇರುಪೇಟೆ ಮೇಲೆ ಬಿದ್ದಿದೆ ಎಂದು ವರದಿ ತಿಳಿಸಿದೆ.

30 ಷೇರುಗಳ ಸೆನ್ಸೆಕ್ಸ್ 110.64 ಅಂಶಗಳಷ್ಟು ಕುಸಿದು 77,580ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ದಿನದ ವಹಿವಾಟಿನಲ್ಲಿ 266.14 ಅಂಶಗಳಷ್ಟು ಕುಸಿದು 77,424ರಲ್ಲಿ ವಹಿವಾಟು ನಡೆಸಿತ್ತು.

ಎನ್‌ಎಸ್‌ಇ ನಿಫ್ಟಿ ಸತತ 6ನೇ ದಿನವೂ ಕುಸಿತ ದಾಖಲಿಸಿದೆ. 26.35 ಅಂಶಗಳಷ್ಟು ಕುಸಿದು 23,532ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ADVERTISEMENT

ಸೆನ್ಸೆಕ್ಸ್ ಗುಚ್ಛದ ಹಿಂದೂಸ್ತಾನ್ ಯೂನಿಲಿವರ್, ಎನ್‌ಟಿಪಿಸಿ, ನೆಸ್ಲೆ, ಇಂಡಸ್‌ಇಂಡ್ ಬ್ಯಾಂಕ್, ಪವರ್ ಗ್ರಿಡ್, ಅದಾನಿ ಪೋರ್ಟ್ಸ್, ಟಾಟಾ ಮೋಟಾರ್ಸ್ ಮತ್ತು ಬಜಾಜ್ ಫಿನ್‌ಸರ್ವ್ ನಷ್ಟ ಅನುಭವಿಸಿವೆ.

ರಿಲಯನ್ಸ್ ಇಂಡಸ್ಟ್ರೀಸ್, ಕೋಟಕ್ ಮಹೀಂದ್ರ ಬ್ಯಾಂಕ್, ಟೆಕ್ ಮಹೀಂದ್ರ, ಮಹೀಂದ್ರ ಅಂಡ್ ಮಹೀಂದ್ರ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಲಾಭ ಗಳಿಸಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 2,502. ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿಗಳನ್ನು ಹಿಂಪಡೆದಿದ್ದಾರೆ. ಆದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) 6,145 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರದ ಮಾಹಿತಿಯಿಂದ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.