ADVERTISEMENT

ಫಾರ್ಮಾ, ಬ್ಯಾಂಕ್‌ ಷೇರುಗಳಲ್ಲಿ ಚೇತರಿಕೆ; ಸೆನ್ಸೆಕ್ಸ್ 700 ಅಂಶ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2021, 5:30 IST
Last Updated 4 ಅಕ್ಟೋಬರ್ 2021, 5:30 IST
ಷೇರುಪೇಟೆ ವಹಿವಾಟು–ಪ್ರಾತಿನಿಧಿಕ ಚಿತ್ರ
ಷೇರುಪೇಟೆ ವಹಿವಾಟು–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸೋಮವಾರ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಫಾರ್ಮಾ ಮತ್ತು ಬ್ಯಾಂಕ್ ವಲಯದ ಷೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದು, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 690 ಅಂಶಗಳಿಗೂ ಅಧಿಕ ಏರಿಕೆ ದಾಖಲಿಸಿದೆ.

ಸೆನ್ಸೆಕ್ಸ್‌ ಬೆಳಿಗ್ಗೆ 10:30ಕ್ಕೆ 59,455.98 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 193.70 ಅಂಶ ಹೆಚ್ಚಳವಾಗಿ 17,725.75 ಅಂಶಗಳಲ್ಲಿ ವಹಿವಾಟು ನಡೆದಿದೆ.

ಡಿವೀಸ್ ಲ್ಯಾಬೊರೇಟರಿಸ್‌ ಷೇರು ಶೇ 8ರಷ್ಟು ಏರಿಕೆಯಾಗಿದೆ. ಡಾ.ರೆಡ್ಡೀಸ್‌, ಎಸ್‌ಬಿಐ, ರಿಲಯನ್ಸ್‌ ಇಂಡಸ್ಟ್ರೀಸ್‌, ಬಜಾಜ್‌ ಫಿನ್‌ಸರ್ವ್‌, ಸನ್‌ ಫಾರ್ಮಾ, ಎಚ್‌ಡಿಎಫ್‌ಸಿ, ಭಾರ್ತಿ ಏರ್‌ಟೆಲ್‌, ಎನ್‌ಟಿಪಿಸಿ ಹಾಗೂ ಐಸಿಐಸಿಐ ಬ್ಯಾಂಕ್‌ ಷೇರುಗಳು ಶೇ 2ವರೆಗೂ ಗಳಿಕೆ ದಾಖಲಿಸಿವೆ. ಟಾಟಾ ಸ್ಟೀಲ್‌, ಟೈಟನ್‌ ಸೇರಿ ಕೆಲವು ಕಂಪನಿಗಳ ಷೇರು ಬೆಲೆ ಇಳಿಮುಖವಾಗಿದೆ.

ADVERTISEMENT

ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 360.78 ಅಂಶ ಕಡಿಮೆಯಾಗಿ 58,765.58, ಹಾಗೂ ನಿಫ್ಟಿ 86.10 ಅಂಶ ಇಳಿಕೆಯಾಗಿ 17,532.05 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿತ್ತು. ಷೇರುಪೇಟೆ ಮಾಹಿತಿ ಪ್ರಕಾರ, ಶುಕ್ರವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹131.39 ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.