ADVERTISEMENT

ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು: ಷೇರು ಸೂಚ್ಯಂಕ ಚೇತರಿಕೆ

ಪಿಟಿಐ
Published 18 ಅಕ್ಟೋಬರ್ 2024, 14:19 IST
Last Updated 18 ಅಕ್ಟೋಬರ್ 2024, 14:19 IST
ಮುಂಬೈ ಷೇರುಪೇಟೆ
ಮುಂಬೈ ಷೇರುಪೇಟೆ   

ಮುಂಬೈ: ಸತತ ಮೂರು ದಿನದ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ಷೇರು ಸೂಚ್ಯಂಕಗಳು, ಶುಕ್ರವಾರ ಚೇತರಿಕೆ ಕಂಡಿವೆ.

ಬ್ಯಾಂಕಿಂಗ್‌ ಷೇರುಗಳ ಖರೀದಿಯಲ್ಲಿ ಏರಿಕೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ನಡೆದ ಸಕಾರಾತ್ಮಕ ವಹಿವಾಟಿನಿಂದ ಸೂಚ್ಯಂಕಗಳು ಏರಿಕೆಯಾಗಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 218 ಅಂಶ ಏರಿಕೆಯಾಗಿ, 81,224ಕ್ಕೆ ವಹಿವಾಟು ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 104 ಅಂಶ ಹೆಚ್ಚಳವಾಗಿ 24,854ಕ್ಕೆ ಸ್ಥಿರಗೊಂಡಿತು.

ADVERTISEMENT

ಐಸಿಐಸಿಐ ಬ್ಯಾಂಕ್‌, ಟಾಟಾ ಮೋಟರ್ಸ್‌, ಟಾಟಾ ಸ್ಟೀಲ್‌, ಎನ್‌ಟಿಪಿಸಿ, ಜೆಎಸ್‌ಡಬ್ಲ್ಯು ಸ್ಟೀಲ್‌, ಎಸ್‌ಬಿಐ ಮತ್ತು ಅದಾನಿ ಪೋರ್ಟ್ಸ್‌ನ ಷೇರುಗಳು ಗಳಿಕೆ ಕಂಡಿವೆ. 

ಏಷ್ಯನ್‌ ಪೇಂಟ್ಸ್‌, ನೆಸ್ಲೆ, ಟೆಕ್‌ ಮಹೀಂದ್ರ, ಎಚ್‌ಸಿಎಲ್‌ ಟೆಕ್ನಾಲಜೀಸ್, ಹಿಂದುಸ್ತಾನ್‌ ಯೂನಿಲಿವರ್‌ ಮತ್ತು ಐಟಿಸಿ ಮೌಲ್ಯದಲ್ಲಿ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.