ADVERTISEMENT

ಷೇರು ಮಾರುಕಟ್ಟೆ: ಆರಂಭಿಕ ವಹಿವಾಟಿನಲ್ಲಿ ಷೇರು ಸೂಚ್ಯಂಕ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2024, 4:58 IST
Last Updated 26 ನವೆಂಬರ್ 2024, 4:58 IST
ಷೇರು ಸೂಚ್ಯಂಕ
ಷೇರು ಸೂಚ್ಯಂಕ   

ಮುಂಬೈ: ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆ ಕಂಡಿವೆ. 

ಸೆನ್ಸೆಕ್ಸ್ 372.51 ಪಾಯಿಂಟ್‌ಗಳಿಂದ 80,482.36ಗೆ ಜಿಗಿದಿದೆ. ನಿಫ್ಟಿ 121.4 ಪಾಯಿಂಟ್‌ ಏರಿಕೆ ಕಂಡು 24,343.30ಕ್ಕೆ ತಲುಪಿದೆ.

30-ಷೇರುಗಳ ಸೆನ್ಸೆಕ್ಸ್ ಪ್ಯಾಕ್‌ನಿಂದ, ಮಹೀಂದ್ರಾ ಮತ್ತು ಮಹೀಂದ್ರಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಅತಿ ಹೆಚ್ಚು ಲಾಭ ಗಳಿಸಿದವು.

ADVERTISEMENT

ಅಲ್ಟ್ರಾಟೆಕ್ ಸಿಮೆಂಟ್, ಲಾರ್ಸೆನ್ ಮತ್ತು ಟೂಬ್ರೊ, ಸನ್ ಫಾರ್ಮಾ, ಅದಾನಿ ಪೋರ್ಟ್‌, ಹಿಂದೂಸ್ತಾನ್ ಯುನಿಲಿವರ್‌ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

ಕೆಲವು ದಿನಗಳ ನಂತರ ವಿದೇಶಿ ಹೂಡಿಕೆದಾರರು (ಎಫ್‌ಐಐಗಳು) ಸೋಮವಾರದಿಂದ ಮತ್ತೆ ಷೇರು ಮಾರುಕಟ್ಟೆಗೆ ಆಗಮಿಸಿದ್ದರಿಂದ ಏರಿಕೆಗೆ ಕಾರಣ ಎನ್ನಲಾಗಿದೆ. ಅವರು ₹ 9,947.55 ಕೋಟಿ ಮೌಲ್ಯದ ಇಕ್ವಿಟಿಗಳನ್ನು ಖರೀದಿಸಿದರು ಎಂದು ವಿನಿಮಯ ಡೇಟಾ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.