ADVERTISEMENT

ಮುಂದುವರಿದ ಷೇರು ಮಾರುಕಟ್ಟೆ ಕುಸಿತ: ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರಿಗೆ ನಷ್ಟ

ಪಿಟಿಐ
Published 24 ಜುಲೈ 2024, 5:19 IST
Last Updated 24 ಜುಲೈ 2024, 5:19 IST
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ   

ಮುಂಬೈ: ಬಜೆಟ್‌ನಲ್ಲಿ ದೀರ್ಘಾವಧಿ ಬಂಡವಾಳ ಲಾಭದ ಮೇಲಿನ ತೆರಿಗೆಯನ್ನು ಏರಿಸಿದ್ದರಿಂದ ಮಂಗಳವಾರ ಆರಂಭವಾಗಿದ್ದ ಷೇರುಮಾರುಕಟ್ಟೆ ಕುಸಿತ, ಇಂದು ಕೂಡ ಮುಂದುವರಿದಿದ್ದು, ಆರಂಭಿಕ ವಹಿವಾಟಿನ ವೇಳೆಗೆ ಸೆನ್ಸೆಕ್ಸ್ ಹಾಗೂ ನಿಫ್ಟಿ ಅಂಶಗಳು ಇಳಿಕೆಯಾಗಿವೆ.

ವಿದೇಶಿ ಬಂಡವಾಳ ಹೊರಹರಿವು ಹಾಗೂ ಜಾಗತಿಕ ಮಾರುಕಟ್ಟೆ ಇಳಿಕೆಯೂ ದೇಶದ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ.

ಬಾಂಬೆ ಷೇರು ಮಾರುಕಟ್ಟೆಯ ಸೂಚ್ಯಂಕ 233.7 ಅಂಶಗಳಷ್ಟು ಇಳಿಕೆ ಕಂಡು 80,195.34ಗೆ ತಲುಪಿದೆ. ನಿಫ್ಟಿ 73.45 ಅಂಶ ಇಳಿಕೆಯಾಗಿ 24,405.60ಕ್ಕೆ ತಲುಪಿದೆ.

ADVERTISEMENT

ಸೆನ್ಸೆಕ್ಸ್ ಗುಚ್ಛದ ಹಿಂದೂಸ್ಥಾನ್ ಯೂನಿಲೆವರ್ ಲಿಮಿಟೆಡ್‌, ಬಜಾಜ್ ಫಿನಾನ್ಸ್, ಎಚ್‌ಸಿಎಲ್‌, ಅಲ್ಟ್ರಾಟೆಕ್ ಸಿಮೆಂಟ್, ಮಹೀಂದ್ರಾ & ಮಹೀಂದ್ರಾ ಹಾಗೂ ಅದಾನಿ ಪೋರ್ಟ್ಸ್ ಮುಂತಾದ ಕಂಪನಿಗಳು ನಷ್ಟ ಅನುಭವಿಸಿವೆ.

ಐಟಿಸಿ, ಟಾಟಾ ಮೋಟಾರ್ಸ್, ಟೆಕ್‌ ಮಹೀಂದ್ರಾ ಹಾಗೂ ಎನ್‌ಟಿಪಿಸಿ ಷೇರುಗಳು ಲಾಭ ಗಳಿಸಿವೆ.

ಮಂಗಳವಾರ ಬಜೆಟ್ ಮಂಡನೆ ವೇಳೆ ಕುಸಿದಿದ್ದ ಸೆನ್ಸೆಕ್ಸ್ ಬಳಿಕ ಚೇತರಿಸಿಕೊಂಡಿತ್ತು. 73.04 ಅಂಶ ಇಳಿಕೆಯಾಗಿ 80,429.04 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. 30.20 ಅಂಶಗಳಷ್ಟು ನಿಫ್ಟಿ ಇಳಿಕೆ ಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.