ADVERTISEMENT

Share Market | ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ

ಪಿಟಿಐ
Published 18 ಜೂನ್ 2024, 5:01 IST
Last Updated 18 ಜೂನ್ 2024, 5:01 IST
<div class="paragraphs"><p>ಸೆನ್ಸೆಕ್ಸ್</p></div>

ಸೆನ್ಸೆಕ್ಸ್

   

(ಪಿಟಿಐ ಚಿತ್ರ)

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಧನಾತ್ಮಕ ಪರಿಣಾಮ ಹಾಗೂ ವಿದೇಶಿ ಒಳಹರಿವಿನಿಂದಾಗಿ ಷೇರು ಸೂಚ್ಯಂಕಗಳು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ.

ADVERTISEMENT

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಏರಿಕೆ ಕಂಡಿವೆ.

ಬಿಎಸ್‌ಇ ಸೆನ್ಸೆಕ್ಸ್ 334.03 ಅಂಶ ಏರಿಕೆ ಕಂಡು 77,326.80 ಅಂಶಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 108.25 ಅಂಶ ಏರಿಕೆಯಾಗಿ 23,573.85 ಅಂಶಕ್ಕೆ ತಲುಪಿದೆ.

ವಿಪ್ರೊ, ಟೈಟಾನ್, ಮಹೀಂದ್ರ ಆ್ಯಂಡ್ ಮಹೇಂದ್ರ, ಟೆಕ್ ಮಹೀಂದ್ರ, ಇನ್ಫೋಸಿಸ್, ಭಾರ್ತಿ ಏರ್‌ಟೆಲ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಹೆಚ್ಚಿನ ಲಾಭ ಕಂಡಿವೆ.

ಮತ್ತೊಂದೆಡೆ ಮಾರುತಿ, ಕೋಟಕ್ ಮಹೀಂದ್ರ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಕುಸಿತ ಕಂಡಿವೆ.

ಏಷ್ಯಾದ ಇತರೆ ಷೇರು ಮಾರುಕಟ್ಟೆಗಳ ಪೈಕಿ ಸಿಯೋಲ್, ಟೊಕಿಯೊ ಹಾಗೂ ಶಾಂಘೈ ಮಾರುಕಟ್ಟೆಗಳು ಏರಿಕೆ ಕಂಡಿದ್ದು, ಹಾಂಕಾಂಗ್ ಕುಸಿತ ಕಂಡಿವೆ. ಸೋಮವಾರ ಅಮೆರಿಕ ಷೇರುಪೇಟೆ ಏರಿಕೆ ಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.