ADVERTISEMENT

Share Market | ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ ಸೆನ್ಸೆಕ್ಸ್, ನಿಫ್ಟಿ

ಪಿಟಿಐ
Published 26 ಸೆಪ್ಟೆಂಬರ್ 2024, 5:17 IST
Last Updated 26 ಸೆಪ್ಟೆಂಬರ್ 2024, 5:17 IST
<div class="paragraphs"><p>ಷೇರು ಮಾರುಕಟ್ಟೆ</p></div>

ಷೇರು ಮಾರುಕಟ್ಟೆ

   

(ರಾಯಿಟರ್ಸ್ ಚಿತ್ರ)

ಮುಂಬೈ: ಐಟಿ ಸ್ಟಾಕ್‌ಗಳ ಖರೀದಿ ಹಾಗೂ ಏಷ್ಯಾ ಷೇರುಪೇಟೆಗಳಲ್ಲಿ ಧನಾತ್ಮಕ ಚಟುವಟಿಕೆ ಹಿನ್ನೆಲೆಯಲ್ಲಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ.

ADVERTISEMENT

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 202.3 ಅಂಶ ಏರಿಕೆ ಕಂಡು 85,372.17 ಅಂಶಕ್ಕೆ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ಎನ್‌ಎಸ್‌ಇ ನಿಫ್ಟಿ ಹೊಸ ಎತ್ತರಕ್ಕೆ ಜಿಗಿತ ಕಂಡಿದೆ. 51.85 ಅಂಶ ಏರಿಕೆಯಾಗಿ 26,056 ಅಂಶಕ್ಕೆ ತಲುಪಿದೆ.

ಮಾರುತಿ, ನೆಸ್ಲೆ, ಟಾಟಾ ಮೋಟಾರ್ಸ್, ಇನ್ಫೋಸಿಸ್, ಟೆಕ್ ಮಹೀಂದ್ರ, ಎಚ್‌ಸಿಎಲ್ ಟೆಕ್ನಾಲಜೀಸ್, ಬಜಾಜ್ ಫಿನ್‌ಸರ್ವ್, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್), ಐಟಿಸಿ, ಭಾರ್ತಿ ಏರ್‌ಟೆಲ್ ಹೆಚ್ಚಿನ ಲಾಭ ಕಂಡಿವೆ.

ಪವರ್ ಗ್ರಿಡ್, ಎನ್‌ಟಿಪಿಸಿ, ಟಾಟಾ ಸ್ಟೀಲ್ಸ್ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್ ಕುಸಿತ ಕಂಡಿವೆ.

ಏಷ್ಯಾದ ಪೈಕಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಕಾಂಗ್ ಏರಿಕೆ ಕಂಡಿವೆ. ಮತ್ತೊಂದೆಡೆ ಬುಧವಾರದ ವಹಿವಾಟಿನ ಅಂತ್ಯಕ್ಕೆ ಅಮೆರಿಕ ಷೇರುಪೇಟೆ ಹಿನ್ನಡೆ ಅನುಭವಿಸಿತ್ತು.

ಸೆಪ್ಟೆಂಬರ್ 24ರಂದು ಮುಂಬೈ ಷೇರುಪೇಟೆ ಸೂಚ್ಯಂಕ, ಮೊದಲ ಬಾರಿಗೆ 85 ಸಾವಿರ ಅಂಶಗಳ ಗಡಿ ದಾಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.