ADVERTISEMENT

Share Market | 84 ಸಾವಿರ ದಾಟಿದ ಸೆನ್ಸೆಕ್ಸ್‌

ಪಿಟಿಐ
Published 20 ಸೆಪ್ಟೆಂಬರ್ 2024, 14:19 IST
Last Updated 20 ಸೆಪ್ಟೆಂಬರ್ 2024, 14:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ ನಡೆದ ವಹಿವಾಟಿನಲ್ಲಿ ಮೊದಲ ಬಾರಿಗೆ 84 ಸಾವಿರ ಅಂಶ ದಾಟಿದೆ. 

ಬ್ಯಾಂಕಿಂಗ್‌ ಷೇರುಗಳ ಮಾರಾಟದ ಏರಿಕೆಯಿಂದಾಗಿ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು. ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತಗೊಳಿಸಿರುವುದು ಹೂಡಿಕೆದಾರರಲ್ಲಿ ಉತ್ಸಾಹ ಹೆಚ್ಚಿಸಿದೆ. ಹಾಗಾಗಿ, ಸೂಚ್ಯಂಕಗಳು ಏರಿಕೆಯ ಹಾದಿ ಹಿಡಿದಿವೆ.

ಹೂಡಿಕೆದಾರರ ಸಂಪತ್ತು ₹6.24 ಲಕ್ಷ ಕೋಟಿ ಹೆಚ್ಚಳವಾಗಿದೆ.

ADVERTISEMENT

ಸೆನ್ಸೆಕ್ಸ್‌ 1,359 ಅಂಶ ಏರಿಕೆ ಕಂಡು, 84,544 ಅಂಶಗಳಲ್ಲಿ ಮುಕ್ತಾಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 375 ಅಂಶ ಏರಿಕೆ ಕಂಡು 25,790 ಅಂಶಗಳಲ್ಲಿ ಸ್ಥಿರಗೊಂಡಿತು. 

ಸೆನ್ಸೆಕ್ಸ್‌ ಗುಚ್ಛದಲ್ಲಿನ ಮಹೀಂದ್ರ ಆ್ಯಂಡ್ ಮಹೀಂದ್ರ ಷೇರಿನ ಮೌಲ್ಯದಲ್ಲಿ ಶೇ 5ರಷ್ಟು ಹೆಚ್ಚಳವಾಗಿದೆ.

ಜೆಎಸ್‌ಡಬ್ಲ್ಯು ಸ್ಟೀಲ್‌, ಐಸಿಐಸಿಐ ಬ್ಯಾಂಕ್‌, ಎಲ್‌ ಆ್ಯಂಡ್ ಟಿ, ಭಾರ್ತಿ ಏರ್‌ಟೆಲ್‌, ನೆಸ್ಲೆ, ಅದಾನಿ ಪೋರ್ಟ್ಸ್‌, ಎಚ್‌ಸಿಎಲ್‌, ಎಚ್‌ಡಿಎಫ್‌ಸಿ, ಟೆಕ್‌ ಮಹೀಂದ್ರ, ಮಾರುತಿ, ಕೋಟಕ್ ಮಹೀಂದ್ರ ಬ್ಯಾಂಕ್‌ ಮತ್ತು ಟಾಟಾ ಸ್ಟೀಲ್‌ ಷೇರುಗಳ ಮೌಲ್ಯ ಏರಿಕೆ ಕಂಡಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಇಂಡಸ್‌ ಇಂಡ್‌ ಬ್ಯಾಂಕ್‌, ಟಿಸಿಎಸ್‌ ಮತ್ತು ಬಜಾಜ್‌ ಫೈನಾನ್ಸ್‌ ಷೇರುಗಳ ಮೌಲ್ಯದಲ್ಲಿ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.