ADVERTISEMENT

ಸೆಪ್ಟೆಂಬರ್‌ನಲ್ಲಿ ಐಪಿಒ ದಾಖಲೆ

ಪಿಟಿಐ
Published 21 ಸೆಪ್ಟೆಂಬರ್ 2024, 13:47 IST
Last Updated 21 ಸೆಪ್ಟೆಂಬರ್ 2024, 13:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಪ್ರಸಕ್ತ ತಿಂಗಳಿನಲ್ಲಿ 28ಕ್ಕೂ ಹೆಚ್ಚು ಕಂಪನಿಗಳು ಆರಂಭಿಕ ಸಾರ್ವಜನಿಕ ಕೊಡುಗೆಯಡಿ (ಐಪಿಒ) ಬಂಡವಾಳ ಸಂಗ್ರಹಿಸುವ ಮೂಲಕ ಷೇರುಪೇಟೆಯನ್ನು ಪ್ರವೇಶಿಸುತ್ತಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಸಿಕ ವರದಿ ತಿಳಿಸಿದೆ.

ದೊಡ್ಡ ಕಂಪನಿಗಳು ಸೇರಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕಂಪನಿಗಳು ಐಪಿಒ ಮೂಲಕ ಬಂಡವಾಳ ಸಂಗ್ರಹಿಸಲು ಮುಂದಾಗಿವೆ. ಕಳೆದ 14 ವರ್ಷಕ್ಕೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಅತಿಹೆಚ್ಚು ಐಪಿಒಗಳು ಪ್ರಕಟಗೊಂಡಿವೆ ಎಂದು ವಿವರಿಸಿದೆ.

ಕಂಪನಿಯು ಷೇರುಪೇಟೆಗೆ ಸೇರ್ಪಡೆಯಾದ ಒಂದು ವಾರದೊಳಗೆ ಹೂಡಿಕೆದಾರರಿಗೆ ಷೇರುಗಳು ಹಂಚಿಕೆಯಾಗಲಿವೆ ಎಂದು ತಿಳಿಸಿದೆ.

ADVERTISEMENT

ಪೇರುಪೇಟೆಯಲ್ಲಿ ನೋಂದಣಿಯಾದ ಹೊಸ ಕಂ‍ಪನಿಗಳು ಪ್ರಸಕ್ತ ವರ್ಷದ ಮೊದಲ ಎಂಟು ತಿಂಗಳ ಅವಧಿಯಲ್ಲಿ ₹60 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಗುರಿ ಹೊಂದಿದ್ದವು. ಸದ್ಯ ಈ ಬಂಡವಾಳ ಸಂಗ್ರಹಿಸುವತ್ತ ಗಮನ ಹರಿಸಿವೆ ಎಂದು ಹೇಳಿದೆ.

ಸತತ ಐದು ತಿಂಗಳಿನಿಂದ ಸರ್ಕಾರದ ಸಾ‌ಲಪತ್ರ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಆದರೆ, ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ಹೂಡಿಕೆ ಕಡಿಮೆಯಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.