ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಹೂಡಿಕೆ ಮಾಡುವುದು ಹೇಗೆ ಎಂದು ಹಿಂದಿನ ಅಂಕಣದಲ್ಲಿ ತಿಳಿದುಕೊಂಡೆವು. ಈಗ ಕಂಪನಿಯೊಂದರ ಐಪಿಒದಪ್ರಮುಖಹಂತಗಳನ್ನು ತಿಳಿಯೋಣ. ಇಡೀ ಪ್ರಕ್ರಿಯೆಯನ್ನು ಸಮಗ್ರವಾಗಿ ತಿಳಿದುಕೊಂಡಾಗ ಐಪಿಒ ಹೂಡಿಕೆಯಲ್ಲಿ ಯಶಸ್ಸು ಸಾಧ್ಯ.
1 ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ಸಂಪರ್ಕ: ‘ಐಪಿಒ’ ಬಗ್ಗೆ ಜನರಿಗೆ ತಿಳಿಸುವುದು ಬಹಳ ಮುಖ್ಯ. ಸುದ್ದಿ ವಾಹಿನಿಗಳು, ದಿನಪತ್ರಿಕೆಗಳು, ಜಾಹೀರಾತು, ಡಿಜಿಟಲ್ ಮಾರ್ಕೆಟಿಂಗ್ ಸೇರಿ ಹಲವು ಮಾಧ್ಯಮಗಳನ್ನು ಬಳಸಿಕೊಂಡು ಕಂಪನಿಗಳು‘ಐಪಿಒ’ಪ್ರಕ್ರಿಯೆಗೆ ಮುಂದಾಗುತ್ತವೆ. ಇದರಿಂದ ನಿರೀಕ್ಷಿತ ಬಂಡವಾಳ ಸಂಗ್ರಹ ಸಾಧ್ಯವಾಗುತ್ತದೆ.
2 ಷೇರಿಗೆ ಬೆಲೆ ನಿಗದಿ:ಕಂಪನಿಯು ಷೇರಿನ ಬೆಲೆ ನಿಗದಿ ಮಾಡುತ್ತದೆ. ಉದಾಹರಣೆಗೆ ₹ 100ರಿಂದ ₹ 120ರ ಬೆಲೆಯಲ್ಲಿಷೇರುಗಳ ಖರೀದಿಗೆ ಕಂಪನಿ ಅವಕಾಶ ಕಲ್ಪಿಸುತ್ತದೆ ಎಂದಿಟ್ಟುಕೊಳ್ಳಿ. ನೀವು ಆಕಂಪನಿಯ ಷೇರಿಗೆ ಎಷ್ಟು ಬೆಲೆ ನಿಗದಿಪಡಿಸಬಹುದು ಎನ್ನುವುದನ್ನು ತೀರ್ಮಾನಿಸಿ ಬಿಡ್ಡಿಂಗ್ ಮಾಡಬಹುದು. ಉದಾಹರಣೆಗೆ, ಎಸ್‌ಬಿಐ ಕಾರ್ಡ್ಸ್ ತನ್ನ ಐಪಿಒ ದರವನ್ನು ₹ 750ರಿಂದ ₹ 755ಕ್ಕೆ ನಿಗದಿ ಮಾಡಿತ್ತು. ಈ ಸಂದರ್ಭದಲ್ಲಿ ನಿಮಗೆ ₹ 750ರಿಂದ ₹ 755ರ ನಡುವೆ ಬಿಡ್ ಮಾಡಲು ಅವಕಾಶವಿರುತ್ತದೆ.
3 ಬುಕ್ ಬಿಲ್ಡಿಂಗ್: ‘ಐಪಿಒ’ದಲ್ಲಿ ಬುಕ್ ಬಿಲ್ಡಿಂಗ್ ಪ್ರಕ್ರಿಯೆಪ್ರಮುಖಹಂತ. ಈ ಅವಧಿಯಲ್ಲಿ ಕಂಪನಿಯಷೇರುಗಳಿಗಾಗಿ ಹೂಡಿಕೆದಾರರು ಬಿಡ್ ಮಾಡಬಹುದು. ಸಾಮಾನ್ಯವಾಗಿ ಬುಕ್ ಬಿಲ್ಡಿಂಗ್ ಹಂತದಲ್ಲಿ ಬಿಡ್ಡಿಂಗ್ ಮಾಡಲು ಮೂರು ದಿನಗಳ ಕಾಲಾವಕಾಶವಿರುತ್ತದೆ.
4 ಕ್ಲೋಶರ್(ಬಿಡ್ಡಿಂಗ್ ಪ್ರಕ್ರಿಯೆ ಕೊನೆಗೊಳಿಸುವುದು):‘ಐಪಿಒ’ಬಿಡ್ಡಿಂಗ್ ಪ್ರಕ್ರಿಯೆ ಕೊನೆಗೊಂಡ ಬಳಿಕ ಯಾವ ಬೆಲೆಗೆ ಗರಿಷ್ಠ ಬಿಡ್ಡಿಂಗ್ ಆಗಿದೆ ಎನ್ನುವುದನ್ನು ಆಧರಿಸಿ ಷೇರಿನ ಬೆಲೆ ನಿಗದಿ ಮಾಡಲಾಗುತ್ತದೆ. ನಂತರದಲ್ಲಿ ಐಪಿಒಗೆ ಬಿಡ್ಡಿಂಗ್ ಮಾಡಿದ್ದವರಿಗೆಷೇರುಗಳ ಹಂಚಿಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಗೆ ಕ್ಲೋಶರ್ ಎಎನ್ನುತ್ತಾರೆ.
5 ಷೇರುಮಾರುಕಟ್ಟೆಗೆ ಸೇರ್ಪಡೆ (ಲಿಸ್ಟಿಂಗ್): ‘ಐಪಿಒ’ಪ್ರಕ್ರಿಯೆ ಪೂರ್ಣಗೊಂಡ ನಂತರ ಕಂಪನಿಯು ಷೇರುಮಾರುಕಟ್ಟೆಗೆ (ಸೆನ್ಸೆಕ್ಸ್, ನಿಫ್ಟಿ) ಸೇರ್ಪಡೆಗೊಳ್ಳುತ್ತದೆ. ಈ ಸೇರ್ಪಡೆ ಪ್ರಕ್ರಿಯೆಯ ನಂತರದಲ್ಲಿ ಆಷೇರುವಹಿವಾಟಿಗೆ ಮುಕ್ತವಾಗುತ್ತದೆ. ನಿರ್ದಿಷ್ಟ ಕಂಪನಿಯೊಂದರ ಷೇರು, ಸೂಚ್ಯಂಕದಲ್ಲಿ ಸೇರ್ಪಡೆಯಾದ ಬಳಿಕ ಯಾರು ಬೇಕಾದರೂ ಆ ಷೇರನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.
ಸ್ಪೆಷಲ್ ಟಿಪ್ಸ್:
1→ಐಪಿಒ ಬಿಡ್ಡಿಂಗ್‌ನಲ್ಲಿ ನಿಮಗೆಷೇರುಗಳು ಸಿಗುವ ಸಾಧ್ಯತೆ ಹೆಚ್ಚಾಗಬೇಕಾದರೆ ಮೊದಲನೇ ದಿನವೇ ಬಿಡ್ ಮಾಡಿ.
2→ಡಿ-ಮ್ಯಾಟ್ ಖಾತೆ ಆರಂಭಿಸಲು 2-3 ದಿನಗಳು ಬೇಕಾಗುತ್ತದೆ. ಹಾಗಾಗಿ ಕೂಡಲೇ ಡಿ-ಮ್ಯಾಟ್ ಖಾತೆ ತೆರೆಯಿರಿ. ಇನ್ನೊಂದು ಐಪಿಒ ಬರುವವರೆಗೂ ಕಾಯಬೇಡಿ.
3→ಬಿಡ್ಡಿಂಗ್ ಮಾಡುವಾಗ ಎರಡೆರಡು ಕಡೆ ಬಿಡ್ಡಿಂಗ್ ಮಾಡಿ, ಒಂದು ಕಡೆ ಹೂಡಿಕೆದಾರ ಅಂತ ನಮೂದಿಸಿ ಮತ್ತೊಂದು ಕಡೆಷೇರುದಾರ ಎಂದು ನಮೂದಿಸಿದರೆ ನಿಮ್ಮ ಕೋರಿಕೆ ರದ್ದಾಗುವ ಸಾಧ್ಯತೆ ಇರುತ್ತದೆ.
4→ಪತ್ನಿ, ತಂದೆ, ಸೋದರರ ಖಾತೆಯಿಂದ ಬಿಡ್ ಮಾಡಿ. ಪ್ಯಾನ್ ಸಂಖ್ಯೆ ಆಧಾರದಲ್ಲಿ ಷೇರು ಹಂಚಿಕೆ ಆಗುವುದರಿಂದಷೇರುಗಳು ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.