ನವದೆಹಲಿ: ಬೆಂಗಳೂರಿನ ಶ್ರೀರಾಮ್ ಪ್ರಾಪರ್ಟೀಸ್ ಕಂಪನಿಯು ತನ್ನ ಷೇರುಗಳನ್ನು ಸಾರ್ವಜನಿಕ ಖರೀದಿಗೆ ಮುಕ್ತಗೊಳಿಸುವ (ಐಪಿಒ) ಕರಡು ದಾಖಲೆಪತ್ರಗಳನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ಕಂಪನಿಯ ಪ್ರಸ್ತಾವಕ್ಕೆ ‘ಸೆಬಿ’ಯು ಮುಂದಿನ ತಿಂಗಳು ಒಪ್ಪಿಗೆ ನೀಡಲಿದ್ದು, ಆ ಬಳಿಕ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ ಎಂದೂ ಹೇಳಿವೆ.
ಐಪಿಒ ಮೂಲಕ ₹ 800 ಕೋಟಿ ಸಂಗ್ರಹಿಸಲು ಕಂಪನಿಯು ಉದ್ದೇಶಿಸಿದೆ. ಇದರಲ್ಲಿ ₹ 250 ಕೋಟಿ ಮೊತ್ತದ ಹೊಸ ಷೇರುಗಳು ಹಾಗೂ ₹ 550 ಕೋಟಿ ಮೊತ್ತದ ಆಫರ್ ಫರ್ ಸೇಲ್ (ಒಎಫ್‌ಸಿ) ಸೇರಿವೆ ಎಂದು ಮೂಲಗಳು ಹೇಳಿವೆ.
ಶ್ರೀರಾಮ್ ಪ್ರಾಪರ್ಟೀಸ್ ಕಂಪನಿಯು ತನ್ನ ಹಾಲಿ ಹೂಡಿಕೆದಾರರಾದ ಟಿಪಿಜಿ ಕ್ಯಾಪಿಟಲ್, ಟಾಟಾ ಕ್ಯಾಪಿಟಲ್, ವಾಲ್ಟನ್ ಸ್ಟ್ರೀಟ್ ಕ್ಯಾಪಿಟಲ್ ಮತ್ತು ಸ್ಟಾರ್‌ವುಡ್ ಕ್ಯಾಪಿಟಲ್ ಭಾಗಶಃ ನಿರ್ಗಮನದ ಪ್ರಸ್ತಾವವನ್ನು ನೀಡಿದೆ.
ಹೊಸ ಷೇರುಗಳ ಮಾರಾಟದಿಂದ ಬರುವ ಮೊತ್ತವನ್ನು ಸಾಲ ಮರುಪಾವತಿ ಅಥವಾ ಪೂರ್ವ ಪಾವತಿ ಹಾಗೂ ಕಾರ್ಪೊರೇಟ್ ಉದ್ದೇಶಗಳಿಗೆ ಬಳಸಲು ಕಂಪನಿ ಆಲೋಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.