ಬೆಂಗಳೂರು: ವೈನ್ ತಯಾರಿಕಾ ಕಂಪನಿ ‘ಸುಲಾ ವಿನ್ಯಾರ್ಡ್ಸ್ ಲಿಮಿಟೆಡ್’ ಆರಂಬಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಪ್ರತಿ ಷೇರಿಗೆ ₹ 340–₹ 357 ಬೆಲೆ ನಿಗದಿ ಮಾಡಿದೆ.
ಸೋಮವಾರದಿಂದ ಬುಧವಾರದವರೆಗೆ ಬಿಡ್ ಸಲ್ಲಿಸಲು ಅವಕಾಶ ಇರಲಿದೆ. ಹೂಡಿಕೆದಾರರು ಕನಿಷ್ಠ 42 ಷೇರುಗಳಿಗೆ ಬಿಡ್ ಸಲ್ಲಿಸಬೇಕು. ಕಂಪನಿಯು 2011ರಿಂದ 2022ರ ನಡುವೆ ಶೇಕಡ 13.3ರ ವಾರ್ಷಿಕ ಸಂಯುಕ್ತ ಬೆಳವಣಿಗೆ ದರವನ್ನು ಕಾಯ್ದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.