ADVERTISEMENT

ಪ್ರೇಕ್ಷಕರ ಮಾಹಿತಿಗಾಗಿ ‘ಸಿನಿಮಾ ಸಮಯ’ ನಿಯತಕಾಲಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 14:51 IST
Last Updated 7 ಅಕ್ಟೋಬರ್ 2024, 14:51 IST
<div class="paragraphs"><p>ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ&nbsp;ಸಿನಿಮಾ ಸಮಯ ನಿಯತಕಾಲಿಕೆ ಬಿಡುಗಡೆ ಮಾಡಲಾಯಿತು</p></div>

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾ ಸಮಯ ನಿಯತಕಾಲಿಕೆ ಬಿಡುಗಡೆ ಮಾಡಲಾಯಿತು

   

ಪ್ರಜಾವಾಣಿ ವಾರ್ತೆ

ಮೈಸೂರು: ದಸರಾ ಚಲನಚಿತ್ರೋತ್ಸವ-2024ರ ಸಂಬಂಧ ಚಲನಚಿತ್ರೋತ್ಸವ ಉಪ ಸಮಿತಿಯಿಂದ ಸೋಮವಾರ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದಲ್ಲಿ ‘ಸಿನಿಮಾ ಸಮಯ’ ದೈನಂದಿನ ಮ್ಯಾಗಜಿನ್ ಬಿಡುಗಡೆ ಮಾಡಲಾಯಿತು.

ADVERTISEMENT

‘ಸಿನಿಮಾ ಸಮಯ’ವು ಮೈಸೂರು ದಸರಾ ಚಲನಚಿತ್ರೋತ್ಸವದ ನಿತ್ಯ ಅವತರಣಿಕೆಯಾಗಿದೆ. ಚಿತ್ರೋತ್ಸವದ ದಿನಗಳಲ್ಲಿ ಯಾವೆಲ್ಲಾ ಚಿತ್ರಗಳು ಯಾವ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು ಎನ್ನುವುದನ್ನು ತಿಳಿಸುತ್ತದೆ. ಕನ್ನಡ ಹಾಗೂ ವಿಶ್ವದ ಪ್ರಪಂಚದ ಹಲವು ಭಾಷೆಗಳ, ಹಲವು ಪ್ರಾಕಾರಗಳ ಚಲನಚಿತ್ರ ಪ್ರದರ್ಶನ ಮತ್ತು ಅದರ ಬಗ್ಗೆ ಪ್ರೇಕ್ಷಕರ ಅಭಿಪ್ರಾಯ, ಸಿನಿಮಾ ತಂಡದವರಿಂದ ಅಭಿಪ್ರಾಯ ಮೊದಲಾದವುಗಳನ್ನು ಒಳಗೊಂಡಿರಲಿದೆ.

‘ಚಿತ್ರೋತ್ಸವದಲ್ಲಿ ನಿತ್ಯವೂ ಏನೆಲ್ಲಾ ನಡೆಯುತ್ತದೆ ಎನ್ನುವುದನ್ನು ಪ್ರೇಕ್ಷಕರಿಗೆ ತಿಳಿಸವ ಪ್ರಯತ್ನವನ್ನು ಇದೇ ಮೊದಲಿಗೆ ವಿನೂತನವಾಗಿ ಮಾಡಲಾಗುತ್ತಿದೆ. ಸಿನಿಪ್ರಿಯರಿಗೆ ಸಮಗ್ರ ಮಾಹಿತಿ ಒದಗಿಸುವ ಉದ್ದೇಶ ನಮ್ಮದಾಗಿದೆ’ ಎಂದು ಉಪ ಸಮಿತಿಯ ಕಾರ್ಯದರ್ಶಿ ಟಿ.ಕೆ. ಹರೀಶ್ ತಿಳಿಸಿದರು.

ಉಪ ಸಮಿತಿಯ ಉಪ ವಿಶೇಷಾಧಿಕಾರಿ ಕೆ.ಎನ್.ಬಸವರಾಜು, ಕಾರ್ಯಾಧ್ಯಕ್ಷ ಬಿ. ರಂಗೇಗೌಡ, ಕಲಾತ್ಮಕ ನಿರ್ದೇಶಕ ಮನು ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.