ಮೈಸೂರು: ದಸರಾ ಪ್ರಯುಕ್ತ ರೈತ ದಸರಾ ಉಪಸಮಿತಿಯು ಇಲ್ಲಿನ ಜೆ.ಕೆ.ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಆನೇಕಲ್ ತಾಲ್ಲೂಕಿನ ಕಗ್ಗಲೀಪುರದ ರಾಮಚಂದ್ರ ರೆಡ್ಡಿ ಅವರ ಎಚ್‌ಎಫ್‌ಎಕ್ಸ್ ತಳಿಯ ಹಸು 42.84 ಲೀಟರ್ ಹಾಲು ನೀಡಿ, ಪ್ರಥಮ ಸ್ಥಾನದೊಂದಿಗೆ ₹1 ಲಕ್ಷ ನಗದು ಬಹುಮಾನವನ್ನು ಮಾಲೀಕರಿಗೆ ದೊರಕಿಸಿತು.
ಚನ್ನರಾಯಪಟ್ಟಣ ತಾಲ್ಲೂಕಿನ ತೋಟಿಗ್ರಾಮದ ಬಾಬು ಅವರ ಹಸು 42.33 ಲೀಟರ್ ನೀಡಿ ದ್ವೀತಿಯ ಸ್ಥಾನದೊಂದಿಗೆ ₹80 ಸಾವಿರ, ಆನೇಕಲ್ ತಾಲ್ಲೂಕಿನ ದೊಮ್ಮಸಂದ್ರದ ಅಜಯ್.ಪಿ ರೆಡ್ಡಿ ಅವರ ಹಸು 41.3 ಲೀಟರ್ ನೀಡಿ ತೃತೀಯ ಸ್ಥಾನದೊಂದಿಗೆ ₹ 60 ಸಾವಿರ ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿನ ಕಣಿಯನಹುಂಡಿಯ ದೇವರಾಜ್ ಅವರ ಹಸು 40.58 ಲೀಟರ್ ನೀಡಿ ನಾಲ್ಕನೇ ಬಹುಮಾನದೊಂದಿಗೆ ₹40 ಸಾವಿರ ನಗದು ಬಹುಮಾನ ಗಳಿಸಿತು.
ಶಾಸಕರಾದ ಕೆ.ಹರೀಶ್ ಗೌಡ, ಡಿ.ರವಿಶಂಕರ್ ಬಹುಮಾನ ವಿತರಿಸಿದರು. ಮೈಸೂರು ನಗರ ಗೋಪಾಲಕರ ಸಂಘ ಕಾರ್ಯಕ್ರಮಕ್ಕೆ ಸಹಕಾರ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.