ಮೈಸೂರು: ಇಲ್ಲಿನ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ನಾಡಕುಸ್ತಿಯ ಮೊದಲ ಹಂತದ ಕುಸ್ತಿ ಪಂದ್ಯಗಳು ಸೋಮವಾರ ಆರಂಭಗೊಂಡಿದ್ದು, ಕುಸ್ತಿಪ್ರಿಯರನ್ನು ರಂಜಿಸಿದವು.
ನಾಡಕುಸ್ತಿಯ ‘ದಸರಾ ಕಂಠೀರವ’, ‘ದಸರಾ ಕೇಸರಿ’, ‘ದಸರಾ ಕುಮಾರ’, ‘ದಸರಾ ಕಿಶೋರಿ’ ಮತ್ತು ‘ದಸರಾ ಕಿಶೋರ’ ಪ್ರಶಸ್ತಿಗಳಿಗಾಗಿ ರಾಜ್ಯದ ವಿವಿಧ ಭಾಗಗಳ ಪೈಲ್ವಾನರು ಸೆಣಸಾಟ ನಡೆಸಿದರು.
‘ದಸರಾ ಕುಮಾರ’ ವಿಭಾಗದಲ್ಲಿ ಮೈಸೂರಿನ ಕೆ.ಚೇತನ್‌ಗೌಡ, ದೀಕ್ಷಿತ್ ಕುಮಾರ್, ಮೊಹಮ್ಮದ್ ಝೈದ್ ಖುರೇಷಿ, ಎಂ.ಆರ್.ವಿಕಾಸ್, ಆರ್.ನಿತಿನ್, ಎಸ್.ಉಪೇಂದ್ರ, ಮಂಡ್ಯದ ಎಚ್.ಸಿ.ಸೂರಜ್, ಪಿ.ಡಿ.ಗಿರೀಶ್ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು.
‘ದಸರಾ ಕಂಠೀರವ’ ವಿಭಾಗದಲ್ಲಿ ಮುಧೋಳದ ಪೈಲ್ವಾನ್ ಬಾಪು ಸಾಹೇಬ್ ಸಿಂಧೆ, ಹಳಿಯಾಳದ ವಿ.ವಿಜಯ್ ಶಿವಾಜಿ, ಬೆಳಗಾವಿಯ ಪರಶುರಾಮ್ ಲಕ್ಷ್ಮಣ್, ಶಿವಕುಮಾರ್ ದೊಡ್ಡಿ, ಎ.ಮುಬಾರಕ್, ನಾಗರಾಜ್, ಧಾರವಾಡದ ಬಿ.ಜಿ.ನಾಗರಾಜ್, ಅಶೋಕ್ ಹನುಮಂತಪ್ಪ, ದಾವಣಗೆರೆಯ ಬಿ.ಎಚ್.ಕಿರಣ್, ಬಸವರಾಜ್, ರಾಘವೇಂದ್ರ ಗೌಡ, ಬಾಗಲಕೋಟೆಯ ಶಿವಯ್ಯ ಪೂಜಾರಿ, ಬಸವರಾಜು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
‘ದಸರಾ ಕೇಸರಿ’ ವಿಭಾಗದಲ್ಲಿ ಬೆಳಗಾವಿಯ ಎಸ್.ಎಂ.ಸುನಿಲ್, ಪರಮಾನಂದ, ಮಹೇಶ್, ಕಾರ್ತಿಕ್, ಪಿ.ರಾಜಾಸಾಬ್, ಹಳಿಯಾಳದ ಮಂಜುನಾಥ್ ಗೌಡ, ರಾಮಣ್ಣ, ಬಾಗಲಕೋಟೆಯ ಎಂ.ಬಾಲಪ್ಪ, ಎ.ದರ್ಶನ್, ಧಾರವಾಡದ ಟಿ.ಮಲ್ಲಿಕಾರ್ಜುನ, ಬಿ.ಪ್ರವೀಣ್, ರೋಹನ್, ದಾವಣಗೆರೆಯ ಬಿ.ಎನ್.ಶರತ್, ಯೋಗೇಶ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
‘ದಸರಾ ಕಿಶೋರ’ ವಿಭಾಗದಲ್ಲಿ ದಾವಣಗೆರೆಯ ಕೆಂಪನ ಗೌಡ, ಮಹೇಶ್ ಪಿ.ಗೌಡ, ಖ್ವಾಜಾ ಮೈನುದ್ದೀನ್, ಕೊರವರ ಸಂಜೀವ, ಸಿ.ಸುನಿಲ್, ಬಾಗಲಕೋಟೆಯ ವೈ.ಸಚಿನ್, ವೈ.ಎಸ್.ಉಮೇಶ್, ಮುಧೋಳದ ಆನಂದ, ‘ದಸರಾ ಕಿಶೋರಿ" ವಿಭಾಗದಲ್ಲಿ ಬಾಗಲಕೋಟೆಯ ಐಶ್ವರ್ಯ, ಹಳಿಯಾಳದ ಭುವನೇಶ್ವರಿ, ಶಾಲಿನಾ ಸಿದ್ದಿ, ಆರ್.ಎಸ್.ಗಾಯತ್ರಿ, ಬೆಳಗಾವಿಯ ಪಿ.ಸ್ವಾತಿ ರಾಜು, ಲಕ್ಷ್ಮೀ ಪಾಟೀಲ್ ಎಂಟರ ಘಟ್ಟ ತಲುಪಿದರು.
ಅ.8ರಂದು ಎಲ್ಲ ವಿಭಾಗಗಳ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಹಾಗೂ 9ರಂದು ಅಂತಿಮ ಸುತ್ತಿನ ಪಂದ್ಯಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.