ADVERTISEMENT

‘ಯುವ ದಸರಾ’ಗೆ ಇನ್ನು ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 22:06 IST
Last Updated 25 ಸೆಪ್ಟೆಂಬರ್ 2024, 22:06 IST
<div class="paragraphs"><p>ಅಶ್ವಿನಿ ಪುನೀತ್‌ ರಾಜ್‌ಕುಮಾರ್</p></div>

ಅಶ್ವಿನಿ ಪುನೀತ್‌ ರಾಜ್‌ಕುಮಾರ್

   

ಮೈಸೂರು: ಈ ಬಾರಿ ಹೊರವಲಯದ ಉತ್ತನಹಳ್ಳಿ ಸಮೀಪ ಆಯೋಜಿಸಿರುವ ‘ಯುವದಸರಾ’ ಕಾರ್ಯಕ್ರಮ ವೀಕ್ಷಣೆಗೆ ಇದೇ ಮೊದಲ ಬಾರಿಗೆ ಟಿಕೆಟ್‌ಗಳ ಮಾರಾಟಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

‘ಟಿಕೆಟ್‌ಗಳನ್ನು ಸೆ.27ರಿಂದ ಆನ್‌ಲೈನ್‌ನಲ್ಲಿ ದಸರೆಯ ಅಧಿಕೃತ ಜಾಲತಾಣವಾದ https://www.mysoredasara.gov.in/ ಹಾಗೂ BookMyShow ಮೂಲಕ ಖರೀದಿಸಬಹುದು. ವೀಕ್ಷಕರ ಗ್ಯಾಲರಿ–1 (ವೇದಿಕೆ ಸಮೀಪ) ಟಿಕೆಟ್‌ ಮುಖಬೆಲೆ
₹8 ಸಾವಿರ ಹಾಗೂ ವೀಕ್ಷಕರ ಗ್ಯಾಲರಿ–2ರ ಟಿಕೆಟ್‌ಗಳ ಮುಖಬೆಲೆ ₹5 ಸಾವಿರ
ನಿಗದಿಪಡಿಸಲಾಗಿದೆ. ಒಂದು ಟಿಕೆಟ್‌ನಲ್ಲಿ ಒಬ್ಬರಿಗೆ ಒಂದು ಕಾರ್ಯಕ್ರಮಕ್ಕೆ ಮಾತ್ರ ಪ್ರವೇಶ (ನಿಗದಿತ ಗ್ಯಾಲರಿಯಲ್ಲಿ) ಅವಕಾಶವಿರುತ್ತದೆ’ ಎಂದು ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.

ADVERTISEMENT

‘ದಸರೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಅ.6ರಿಂದ 10ರವರೆಗೆ ನಿತ್ಯ ಸಂಜೆ 6ರಿಂದ 10ರವರೆಗೆ ಯುವ ದಸರಾ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ಅ.6ರಂದು ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಉದ್ಘಾಟಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

‘ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಒಂದು ಲಕ್ಷ ಜನ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ‘ಟಿಕೆಟ್‌ ಆಧರಿಸಿ ಕುರ್ಚಿ ವ್ಯವಸ್ಥೆ’ಯನ್ನೂ ಮಾಡಲಾಗಿದೆ. ಕಾಯ್ದಿರಿಸಲು ಆನ್‌ಲೈನ್‌ ಮೂಲಕ ಮಾರಾಟಕ್ಕೆ ಕ್ರಮ ವಹಿಸಲಾಗಿದೆ’ ಎಂದು ಅವರು
ಮಾಹಿತಿ ನೀಡಿದ್ದಾರೆ.

‘ಅ.6ರಂದು ಖ್ಯಾತ ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್‌,

ಅ.7ರಂದು ಖ್ಯಾತ ಸಂಗೀತ ಸಂಯೋಜಕ ರವಿ ಬಸ್ರೂರ್,

ಅ.8ರಂದು ಖ್ಯಾತ ರ‍್ಯಾಪರ್ ಬಾದ್‌ಷಾ, ಅ.9ರಂದು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಅ.10ರಂದು ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ಇಳಯರಾಜ ಹಾಗೂ ತಂಡದವರು ರಸಸಂಜೆ ಕಾರ್ಯಕ್ರಮ ನೀಡಲಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.