ಆಷಾಢ ಮಾಸ ಸಮೃದ್ಧಿಯ ಪ್ರತೀಕವೆಂದು ಭಾವಿಸಲಾಗುತ್ತದೆ. ಬೇಸಿಗೆಯಲ್ಲಿ ಆವಿಗಟ್ಟಿದ ಮೋಡಗಳೆಲ್ಲ ಸದಾ ಜಿಟಿಜಿಟಿ ಮಳೆ ಸುರಿಸಿ, ಹದಗೊಂಡ ಹೊಲದಲ್ಲಿ ಬಿತ್ತಿದ ಬೀಜಗಳು ಮೊಳಕೆಯೊಡೆದು ಬೆಳೆಯುವ ಕಾಲವಿದು.
ಸದಾ ಜಿಟಿಜಿಟಿ ಸೋನೆ ಮಳೆ ಸುರಿಯುವುದು, ಇಲ್ಲವೇ ಹಿಟ್ಟು ಸೋಸಿದಂತಹ ತುಷಾರ ಮಳೆ. ಈ ಮಾಸದ ಮಂಗಳವಾರ, ಶುಕ್ರವಾರಗಳಲ್ಲಿ ಭಕ್ತಿಯ ಪರಾಕಾಷ್ಠೆಯನ್ನು ಕಾಣಬಹುದು. ಶಕ್ತಿ ದೇವತೆಯ ಪೀಠಗಳಲ್ಲಿ ವಿವಿಧ ಭಕುತಿಯ ಭಾವಗಳು ಕಂಡು ಬರುತ್ತವೆ.
ದೇವಿಯ ಮುಂದೆ ದೇಹಿ ಎಂದು ನಿಲ್ಲುವಾಗ ಬದುಕೆಲ್ಲ ಬೆಲ್ಲವಾಗಲಿ ಎಂದು ಬೆಲ್ಲದ ದೀಪಗಳನ್ನೂ, ದುಷ್ಟಶಕ್ತಿಗಳ ಸಂಹಾರವಾಗಲಿ ಎಂದು ನಿಂಬೆ ದೀಪಗಳನ್ನೂ, ಹರಳುಪ್ಪು, ಮೆಣಸಿನ ತಟ್ಟೆಗಳಿಂದ ಇಳಿ ತೆಗೆದು ಕೆಟ್ಟ ದೃಷ್ಟಿ ನಿವಾರಣೆ ಆಗಲಿ ಎಂದು ವಿವಿಧ ಆಚರಣೆಗಳನ್ನು ಆಚರಿಸುತ್ತಾರೆ. ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ, ದೇಗುಲದಲ್ಲಿ ಇಂಥ ಭಕುತಿಯ ವಿವಿಧ ಭಾವಗಳನ್ನು ಪ್ರಜಾವಾಣಿಯ ಫೋಟೊ ಜರ್ನಲಿಸ್ಟ್ ಎಂ.ಎಸ್. ಮಂಜುನಾಥ್ ಸೆರೆ ಹಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.