ಭಾದ್ರಪದ ಶುಕ್ಲದ ಚೌತಿಯಂದು ಮನೆಮನೆಗೆ, ಓಣಿ ಓಣಿಗೆ ಬರುವ ಗಣಪ ನಂತರದ ದಿನಗಳಲ್ಲಿ ಗೌರಿಯೊಂದಿಗೆ ಗಂಗೆಯ ಮಡಿಲು ಸೇರುತ್ತಾನೆ. ವೈವಿಧ್ಯಮಯ ರೂಪದಲ್ಲಿ ಬಂದು, ಪ್ರತಿಷ್ಠಾಪಿಸಿಕೊಂಡು, ತಪ್ಪು ಮಾಡದಂತೆ ಮಾತು ಕೊಡಲಿ ಎಂದು ಊಠ್‌ಬೈಟ್ ಮಾಡಿಸಿಕೊಂಡು, ಭಕ್ತರು ಕಿವಿ ಹಿಡಿದುಕೊಂಡು ತಪ್ಪೊಪ್ಪಿಗೆ ಮಾಡಿದಾಗ, ಸೊಂಡಿಲಡಿಯಲ್ಲಿ ನಗುವ ಈ ಮುದ್ದು ದೇವರಿಗೆ ಈ ವಾರ, ವಿದಾಯದ ವಾರ. ಬೆಸ ಸಂಖ್ಯೆಗಳಷ್ಟು ದಿನ ಸಂಭ್ರಮ ಪಡುವ ಗಣಪ ಬೆಂಗಳೂರಿನಲ್ಲಿ ಮರಳಿ ತನ್ನೂರಿಗೆ ಹೋದ ಈ ಪರಿಯನ್ನು ಪ್ರಜಾವಾಣಿಯ ಫೋಟೊ ಜರ್ನಲಿಸ್ಟ್ ಎಂ.ಎಸ್. ಮಂಜುನಾಥ್ ಸೆರೆ ಹಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.