ADVERTISEMENT

ಸಂಸ್ಮರಣೆ | ಚರಿತ್ರೆಯ ಅಪರೂಪದ ಗುರು-ಶಿಷ್ಯ ಜೋಡಿ

ಮಹೇಶ ಜೋಶಿ
Published 2 ಜುಲೈ 2020, 19:30 IST
Last Updated 2 ಜುಲೈ 2020, 19:30 IST
ಗುರು ಗೋವಿಂದಭಟ್ಟರು ಮತ್ತು ಶಿಶುನಾಳ ಶರೀಫರು
ಗುರು ಗೋವಿಂದಭಟ್ಟರು ಮತ್ತು ಶಿಶುನಾಳ ಶರೀಫರು   
""

ಮತ, ಧರ್ಮಗಳನ್ನು ಬದಿಗೊತ್ತಿ, ಸಹೋದರತ್ವ ವನ್ನು ಹಿಡಿದು, ಮತೀಯ ಸೌಹಾರ್ದತೆಯನ್ನು ತೋರಿ ಸಿದ ದಾರ್ಶನಿಕರು - ಕಳಸದ ಗುರುಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರು. ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ, ಸಮನ್ವಯ ಮತ್ತು ಸಮತೆಯನ್ನು, ಸಮಭಾವ, ಸಮಚಿತ್ತ ಹಾಗೂ ಸಮದೃಷ್ಟಿಯಿಂದ ನೋಡಿದಂತಹ ‘ಸಮಾನತೆಯ ಹರಿಕಾರರು’.

ಇಬ್ಬರೂ 70 ವರ್ಷ ಬದುಕಿ, ಅಪರೂಪದ ಗುರು ಶಿಷ್ಯರ ಜೋಡಿ ಎಂದು ದಾಖಲೆಯನ್ನು ಸೃಷ್ಟಿ ಮಾಡಿ, ಇತಿಹಾಸದಲ್ಲಿ ಅಚ್ಚಳಿಯದೆ ಉಳಿದರು. ಶರೀಫರು ದೇಹ ಬಿಡುತ್ತಿದ್ದಂತೆ, ಒಂದು ಕಡೆ ಕುರಾನ್ ಪಠಣ, ಇನ್ನೊಂದು ಕಡೆ ಮಂತ್ರ ಪಠಣ ಮಾಡಿ ಅಂತ್ಯಕ್ರಿಯೆ ನಡೆಸಿದರು.

ಭಾವೈಕ್ಯತೆಗೆ ಶರೀಫರು ಬೀರಿದ ಪ್ರಭಾವವನ್ನು ಅವರ ಅಂತ್ಯಕ್ರಿಯೆಯಲ್ಲೂ ಕಾಣಬಹುದು. ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರುಗೋವಿಂದ ಭಟ್ಟರ ಪ್ರತಿಷ್ಠಾನ ತತ್ವ ರಸಾಯನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯದ ಹಲವೆಡೆ ನಡೆದಿದೆ; ಮುಂದೆಯೂ ನಡೆಯಲಿದೆ.

ADVERTISEMENT
ಲೇಖಕರು:ಮಹೇಶ್‌ ಜೋಶಿ, ದೂರದರ್ಶನದ ನಿವೃತ್ತ, ಹೆಚ್ಚುವರಿ ಮಹಾನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.