ಕೆರೂರ(ಡಾ.ಬಿ.ಎಸ್.ಗದ್ದಗಿಮಠ ವೇದಿಕೆ): ಕೃತಿ ಸಂಪಾದನೆಯ ಕಾರ್ಯದಲ್ಲಿ ವಿಷಯದ ಆಯ್ಕೆ, ಲೇಖಕರನ್ನು ಗುರುತಿಸುವುದು, ಮುದ್ರಣದಲ್ಲಿ ತಪ್ಪಿಲ್ಲದಂತೆ ಎಚ್ಚರ ವಹಿಸುವುದು ಮತ್ತು ಅಧ್ಯಾಯಗಳನ್ನು ವಸ್ತುನಿಷ್ಠವಾಗಿ ವಿಂಗಡಿಸು ವುದು, ಮಾರ್ಗದರ್ಶಿಯಾದ ಪ್ರಸ್ತಾವನೆ ನೀಡುವುದು, ನಿಗದಿತ ವೇಳೆಗೆ ಪ್ರಕಟಪಡಿಸುವುದು ಅತ್ಯಂತ ಜವಾಬ್ದಾರಿಯುತ ಕೆಲಸವಾಗಿದೆ ಎಂದು ಸಂಶೋಧಕ ಸಾಹಿತಿ ಡಾ.ಪ್ರಕಾಶ ಖಾಡೆ ಹೇಳಿದರು.
ಕನ್ನಡ ವಿಶ್ವವಿದ್ಯಾಲಯ ಹಂಪಿ ಹಸ್ತಪ್ರತಿ ಶಾಸ್ತ್ರ ವಿಭಾಗ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಹಮ್ಮಿಕೊಂಡ ಅಖಿಲ ಕರ್ನಾಟಕ ಒಂಬತ್ತನೆಯ ಹಸ್ತಪ್ರತಿ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ `ಸಮ್ಮೇಳನಾಧ್ಯಕ್ಷ ಡಾ.ಬಿ.ಕೆ.ಹಿರೇಮಠ ಅವರ ಸಂಪಾದಿತ ಕೃತಿಗಳು' ಕುರಿತು ಪ್ರಬಂಧ ಮಂಡಿಸಿ ಮಾತನಾಡಿದರು.
ಡಾ.ಹಿರೇಮಠರ ಸಂಪಾದಿತ ಕೃತಿಗಳು ಮಾದರಿ ಯಾಗಿವೆ. ಚಿತ್ರಕಲೆ,ವಚನ ಸಾಹಿತ್ಯ ಅದರಲ್ಲೂ ವಿಶೇಷವಾಗಿ ಶೈವ ಸಾಹಿತ್ಯದ ಅವರ ಸಂಪಾದನಾ ಕೃತಿಗಳು ಮೊದಲ ಬಾರಿಗೆ ಅನೇಕ ಹೊಸ ವಿಷಯಗಳನ್ನು ಕನ್ನಡಕ್ಕೆ ಕೊಟ್ಟಿವೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಅಮೂರ್ತ ವಾಗಿಯೇ ಉಳಿಯುತ್ತಿದ್ದ ಜ್ಞಾನನಿಧಿಯನ್ನು ತಮ್ಮ ಸಂಪಾದನೆ ಕೃತಿಗಳ ಮೂಲಕ ಕಟ್ಟಿಕೊಟ್ಟ ಡಾ.ಹಿರೇಮಠರ ಕಾರ್ಯ ದಾಖಲಾರ್ಹ. ಅವರ ಶ್ರಮ. ವಿದ್ವತ್ತು, ಸಂಘಟನಾ ಕುಶಲತೆ, ಕ್ರಿಯಾಶೀಲತೆ ಹಾಗೂ ಸಮಾಜಮುಖಿ ಚಿಂತನೆಯ ಮೂಲಕ ಕನ್ನಡ ಹಸ್ತಪ್ರತಿ ಮತ್ತು ಗ್ರಂಥ ಸಂಪಾದನಾ ಕ್ಷೇತ್ರ ವಿಸ್ತಾರಗೊಂಡಿದೆ ಎಂದರು.
`ಹಿರೇಮಠರ ವ್ಯಕ್ತಿತ್ವ' ಕುರಿತು ಮಾತನಾಡಿದ ಕವಿ ಡಾ.ಸತ್ಯಾನಂದ ಪಾತ್ರೋಟ, ಡಾ.ಹಿರೇಮಠ ಅವರದು ಯಾವುದಕ್ಕೂ ರಾಜಿಯಾಗದ ಸ್ವಭಾವ, ಅವರೆಂದೂ ಒಳ ಒಪ್ಪಂದ ಹೊರ ಒಪ್ಪಂದ ಮಾಡಿಕೊಂಡು ಬದುಕಲಿಲ್ಲ. ರಾಜಕಾರಣಿಗಳನ್ನು ಮೀರಿಸುವಷ್ಟು ನಮ್ಮ ಸಾಹಿತಿಗಳು ಸಾಹಿತ್ಯ ಕ್ಷೇತ್ರವನ್ನು ಆತಂಕಕ್ಕೆ ದೂಡಿದ್ದಾ ರೆ. ಅಂಥವರ ನಡುವೆ ಅಹಂಕಾರ ಮೀರಿದ ಆಪ್ತತೆ, ಖುರ್ಚಿಮೀರಿದ ದೊಡ್ಡಸ್ತಿಕೆಯಿಂದ ಡಾ.ಹಿರೇ ಮಠರ ವ್ಯಕ್ತಿತ್ವ ಅರಳಿದೆ. ತುಂಬಿದ ಹೊಳೆಯಂತೆ ಗಂಭೀರ ವ್ಯಕ್ತಿತ್ವ ಅವರದು ಎಂದರು.
ಸಂಕೇಶ್ವರ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಗುರುಪಾದ ಮರೇಗುದ್ದಿ ಮಾತನಾಡಿ, ಡಾ.ಹಿರೇಮಠರ ಸಂಶೋಧನಾ ಪ್ರಬಂಧದಲ್ಲಿ ಸಾಂಸ್ಕತಿಕ ಇತಿಹಾಸ ಅನಾವರಣಗೊಂಡಿದೆ. ಕನ್ನಡದ ಕೆಲವೇ ಅತ್ಯುತ್ತಮ ಸಂಶೋಧನಾ ಪ್ರಬಂಧಗಳಲ್ಲಿ ಡಾ.ಹಿರೇಮಠರ ಕನ್ನಡ ಹಸ್ತಪ್ರತಿಗಳು ಒಂದು ಅಧ್ಯಯನ ಮುಖ್ಯವಾಗಿದೆ. ಜಾನಪದ ಸಂಶೋಧನೆಯಲ್ಲಿ ಕೆರೂರಿನ ಡಾ.ಗದ್ದಗಿಮಠರು ಆದ್ಯರಾದರೆ, ಹಸ್ತಪ್ರತಿ ಸಂಶೋಧನೆಯಲ್ಲಿ ಡಾ.ಬಿ.ಕೆ.ಹಿರೇಮಠರು ಆದ್ಯರು ಎಂದರು.
ಹಂಪಿ ವಿ.ವಿ.ಯ ಡಾ.ಶಿವಾನಂದ ಭಂಟನೂರ ಅವರು `ಡಾ.ಹಿರೇಮಠರ ಕಲಾಕೃತಿಗಳು' ಕುರಿತು ಉಪನ್ಯಾಸ ನೀಡಿದ ಡಾ.ಹಿರೇಮಠರು ಸಾಂಪ್ರ ದಾಯಕ ಮತ್ತು ನೈಜಕಲೆಯ ಚಿತ್ರಗಳನ್ನು ನವ್ಯಶೈಲಿಯಲ್ಲಿ ರೂಪಿಸಿದ್ದಾರೆ ಎಂದರು.
ಪ್ರಾ.ಪ್ರಕಾಶ ನರಗುಂದ `ಡಾ.ಹಿರೇಮಠರ ಕುರಿತ ಅಧ್ಯಯನಗಳು' ಕುರಿತು ಮಾತನಾಡಿ ಅವರ ಅಭಿನಂದನ ಗ್ರಂಥ ನಿಜದ ನೆಲೆಯ ಭಾಗಗಳನ್ನು ಉಲ್ಲೇಖಿಸಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕಸಬಾ ಜಂಬಗಿ ರುದ್ರಮುನಿ ಶಿವಾಚಾರ್ಯರು ಡಾ.ಬಿ.ಕೆ. ಹಿರೇಮಠರು ಅತ್ಯುತ್ತಮ ಪ್ರಾಧ್ಯಾಪಕರು,ವಿಶಾಲ ಮನೋಭಾವದ ಜಂಗಮರು, ಬದುಕಿನಲ್ಲಿ ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆ ಮೆರೆದವರು ಎಂದರು.
ಸಮ್ಮೇಳನಾಧ್ಯಕ್ಷ ಡಾ.ಬಿ.ಕೆ. ಹಿರೇಮಠ ಡಾ.ವಿರೇಶ ಬಡಿಗೇರ, ಡಾ.ಎಂ.ಎನ್.ವಾಲಿ, ಡಾ.ಬಸವರಾಜ ಮಲಶೆಟ್ಟಿ, ಡಾ.ಶ್ರೀಶೈಲಹುದ್ದಾರ, ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಡಾ.ಸಂಗ ಮೇಶ ಕಲ್ಯಾಣಿ, ಡಾ.ಕೆ. ರವಿಂದ್ರನಾಥ, ಅಬ್ಬಾಸ ಮೇಲಿನಮನಿ, ಶಿವಾ ನಂದಶೆಲ್ಲಿಕೇರಿ, ಅರ್ಜುನ ಕೊರಟಕರ, ಎಸ್.ಜಿ. ಕೋಟಿ, ಬಿ.ಪಿ. ಹಿರೇಸೋಮಣ್ಣವರ, ಉಷಾ ಗದ್ದಗಿಮಠ ಉಪಸ್ಥಿತರಿದ್ದರು. ಡಾ.ಜಿ.ಐ.ನಂದಿಕೋಲಮಠ ಹಾಗೂ ಸುಮಂಗಲಾ ಮೇಟಿ ನಿರೂಪಿಸಿದರು. ರಾಜೇಶ್ವರಿ ಶೀಲವಂತ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.