ಕೂಡಲಸಂಗಮ: ಕೃಷ್ಣಾನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸುರಿದ ಪರಿಣಾಮ ಆಲಮಟ್ಟಿ ಜಲಾಶಯದಿಂದ 2 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗಿದೆ. ಪರಿಣಾಮ ನಾರಾಯಣಪುರ ಜಲಾಶಯದ ಹಿನ್ನಿರು ಅಧಿಕಗೊಂಡಿದ್ದು, ಸಂಗಮೇಶ್ವರ ದೇವಾಲಯಕ್ಕೆ ನೀರು ನುಗ್ಗಲು 6 ಮೆಟ್ಟಿಲುಗಳು ಬಾಕಿ ಇವೆ.
ಗುರುವಾರ ಕೃಷ್ಣಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಕೂಡಲಸಂಗಮ ಅಭಿವೃದ್ಧಿ ಮಂಡಳಿ ಭದ್ರತಾ ಸಿಬ್ಬಂದಿ ನದಿಯ ದಡಕ್ಕೆ ಪ್ರವಾಸಿಗರು ಹೋಗದಂತೆ ತಡೆಯುವ ಕಾರ್ಯ ಮಾಡುತ್ತಿದ್ದಾರೆ. ಗುರುವಾರ ಬೆಳಿಗ್ಗೆ ಸಂಗಮೇಶ್ವರ ದೇವಾಲಯ ಪ್ರವೇಶಿಸಲು 10 ಮೆಟ್ಟಿಲು ಇದ್ದು ಸಂಜೆ 6 ಗಂಟೆ ಸುಮಾರಿಗೆ 6 ಮೆಟ್ಟಿಲು ಬಾಕಿ ಇವೆ. ಬೆಳಗ್ಗೆಯಿಂದ ಸಾಯಂಕಾಲದ ಅವಧಿಯಲ್ಲಿಯೇ ನಾಲ್ಕು ಮೆಟ್ಟಿಲು ನೀರು ಅಧಿಕಗೊಂಡಿದೆ. ಇದೇ ಪ್ರಮಾಣದಲ್ಲಿ ನೀರು ಬಂದರೆ ಕೂಡಲಸಂಗಮ ಸುತ್ತಮುತ್ತಲ್ಲಿನ ಕೃಷ್ಣಾ, ಮಲಪ್ರಭಾ ನದಿ ದಡದ ಗ್ರಾಮಗಳಿಗೆ ಮುಳುಗಲಿವೆ.
ಬಸವಣ್ಣನ ಐಕ್ಯ ಮಂಟಪ, ಕೂಡಲಸಂಗಮ ಅಡವಿಹಾಳ ಸೇತುವೆಯಿಂದ ಕೃಷ್ಣಾ ನದಿ ತುಂಬಿ ಹರಿಯುವ ದೃಶ್ಯವನ್ನು ಪ್ರವಾಸಿಗರು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.