ADVERTISEMENT

ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ: ಬೆಳೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:26 IST
Last Updated 26 ಜುಲೈ 2024, 14:26 IST
ಬಾಗಲಕೋಟೆ ತಾಲ್ಲೂಕಿನ ಮಂಕಣಿ ಗ್ರಾಮದ ಜಮೀನುಗಳಿಗೆ ನೀರು ನುಗ್ಗುತ್ತಿದ್ದು, ಕಬ್ಬು, ಸೂರ್ಯಕಾಂತಿ ಮತ್ತಿತತರ ಬೆಳೆಗಳಲ್ಲಿ ನೀರು ನಿಂತಿದೆ.
ಬಾಗಲಕೋಟೆ ತಾಲ್ಲೂಕಿನ ಮಂಕಣಿ ಗ್ರಾಮದ ಜಮೀನುಗಳಿಗೆ ನೀರು ನುಗ್ಗುತ್ತಿದ್ದು, ಕಬ್ಬು, ಸೂರ್ಯಕಾಂತಿ ಮತ್ತಿತತರ ಬೆಳೆಗಳಲ್ಲಿ ನೀರು ನಿಂತಿದೆ.   

ರಾಂಪುರ: ಆಲಮಟ್ಟಿ ಜಲಾಶಯದಿಂದ 3 ಲಕ್ಷ ಕ್ಯುಸೆಕ್ ನೀರು ಹರಿಬಿಡುತ್ತಿರುವುದರಿಂದ ಜಲಾಶಯದ ಕೆಳಗಿನ ಭಾಗದ ನದಿ ತೀರದ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಲು ಪ್ರಾರಂಭಿಸಿದೆ.

ಗುರುವಾರ ಸಂಜೆ ಮ್ಯಾಗೇರಿ, ಮಂಕಣಿ, ಬೊಮ್ಮಣಗಿ, ಡೊಮನಾಳ ಗ್ರಾಮಗಳತ್ತ ನೀರು ಹರಿಯಲು ಪ್ರಾರಂಭಿಸಿದ್ದು, ಜಮೀನುಗಳಲ್ಲಿರುವ ಕಬ್ಬು, ತೊಗರಿ, ಹೆಸರು, ಹತ್ತಿ, ಸೂರ್ಯಕಾಂತಿ ಬೆಳೆಗಳಲ್ಲಿ ನೀರು ನಿಂತಿದೆ. ಮಲಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಲ್ಲಿ ಹಿನ್ನೀರು ಇನ್ನಷ್ಟು ವ್ಯಾಪಿಸಿ ಈ ಗ್ರಾಮಗಳತ್ತ ನೀರು ನುಗ್ಗುವ ಸಂಭವವಿದೆ.

ರಾಂಪುರ ಉಪ ತಹಶೀಲ್ದಾರ್‌ ನೀಲೇಶ ಕರಡಿ, ಗ್ರಾಮ ಲೆಕ್ಕಾಧಿಕಾರಿ, ನೋಡಲ್ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿ ಪಿಡಿಒ ಶುಕ್ರವಾರ ಬೆಳಗಿನಿಂದಲೂ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ನದಿಗಳತ್ತ ಜನರು ತೆರಳದಿರುವಂತೆ ಪ್ರತಿ ಗ್ರಾಮದಲ್ಲೂ ಡಂಗೂರ ಸಾರಿಸಿದ್ದಾರೆ.

ADVERTISEMENT

ಆಲಮಟ್ಟಿ ಜಲಾಶಯದಿಂದ ನೀರು ಹೊರಬಿಡುವ ಪ್ರಮಾಣ ಹೆಚ್ಚಾದಲ್ಲಿ ಮ್ಯಾಗೇರಿ, ಬೊಮ್ಮಣಗಿ, ಡೊಮನಾಳ, ಮಂಕಣಿ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.