ಗುಳೇದಗುಡ್ಡ: ತಾಲ್ಲೂಕಿನ ಹಾನಾಪೂರ ಎಸ್.ಪಿ.ಗ್ರಾಮದ ಪೂರ್ಣಾನಂದ ಮಹಾಮುನಿಗಳ ಆಶ್ರಮದಲ್ಲಿ ವಿಶ್ವಶಾಂತಿಗಾಗಿ ನಡೆದ ಕೋಟಿ ಜಪಯಜ್ಞ ಕಾರ್ಯಕ್ರಮ ಹಾಗೂ ಶ್ರೀಗಳ ಭಾವಚಿತ್ರ ಮೆರವಣಿಗೆ, ಅಡ್ಡ ಪಲ್ಲಕ್ಕಿ ಮಹೋತ್ಸವ, ಕುಂಭಮೇಳ ಕಾರ್ಯಕ್ರಮ ಈಚೆಗೆ ನಡೆಯಿತು.
ಗ್ರಾಮದ ಶ್ರದ್ಧಾನಂದ ಮಠದಿಂದ ಹೊರಟ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಎತ್ತು ಕುಣಿತ, ಭಜನೆ, ಡೊಳ್ಳು ಸೇರಿದಂತೆ ವಿವಿಧ ಜಾನಪದ ವಾದ್ಯ ಮೇಳಗಳು ಮತ್ತು ಮಹಿಳೆಯರಿಂದ ಪೂರ್ಣಕುಂಭ ಮೇಳದ ಅದ್ದೂರಿ ಮೆರವಣಿಗೆ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ ಹಿರೇಗೌಡರ, ಉಪಾಧ್ಯಕ್ಷೆ ಸಂಗೀತಾ ಪಮ್ಮಾರ, ಕರಿಯವ್ವ ಮಾದರ, ಪುಂಡಲಿಕ ನಾಯಕ, ಸೋಮು ರಾಠೋಡ, ಅಯ್ಯಪ್ಪ ಹೂಗಾರ, ಬಸಪ್ಪ ಗೌಡರ, ಯಮನಪ್ಪ ಹಿರೇಗೌಡರ, ಗಿರಿಯಪ್ಪ ಪಮ್ಮಾರ, ಭೀರಪ್ಪ ಪಮ್ಮಾರ, ದೇವಪ್ಪ ನಾಯಕ, ವೈ.ಬಿ.ಗೌಡರ, ಗಣಪತಿ ನೆಲ್ಲೂರ, ಶಿವಪ್ಪ ಹಿರೇಗೌಡರ, ಯಮನಪ್ಪ ಬಾಲನ್ನವರ, ಪಾಂಡಪ್ಪ ರಾಠೋಡ, ರಾಮಪ್ಪ ಪಮ್ಮಾರ, ಗೋಪಾಲ ರಾಠೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.