ADVERTISEMENT

ಶೌಚಾಲಯ ಬೇಕು ಎಂದು ಶಾಸಕ HY ಮೇಟಿ ಪುತ್ರಿಯಿಂದ ಸಚಿವ ತಿಮ್ಮಾಪುರಗೆ ಮನವಿ

ಎಚ್‌.ವೈ. ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ಜನತಾ ದರ್ಶನದಲ್ಲಿ ಸಾಲಿನಲ್ಲಿ ನಿಂತು ಸಚಿವ ಆರ್‌.ಬಿ.ತಿಮ್ಮಾಪುರ ಅವರಿಗೆ ಮನವಿಪತ್ರ ಸಲ್ಲಿಸಿದರು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2023, 13:59 IST
Last Updated 25 ಸೆಪ್ಟೆಂಬರ್ 2023, 13:59 IST
<div class="paragraphs"><p>ಎಚ್‌.ವೈ. ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ಜನತಾ ದರ್ಶನದಲ್ಲಿ ಸಾಲಿನಲ್ಲಿ ನಿಂತು ಸಚಿವ ಆರ್‌.ಬಿ.ತಿಮ್ಮಾಪುರ ಅವರಿಗೆ ಮನವಿಪತ್ರ ಸಲ್ಲಿಸಿದರು</p></div>

ಎಚ್‌.ವೈ. ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ಜನತಾ ದರ್ಶನದಲ್ಲಿ ಸಾಲಿನಲ್ಲಿ ನಿಂತು ಸಚಿವ ಆರ್‌.ಬಿ.ತಿಮ್ಮಾಪುರ ಅವರಿಗೆ ಮನವಿಪತ್ರ ಸಲ್ಲಿಸಿದರು

   

ಬಾಗಲಕೋಟೆ: ‘ಸಾಮೂಹಿಕ ಶೌಚಾಲಯ ನಿರ್ಮಿಸಿಕೊಡಬೇಕು’ ಎಂದು ಸ್ಥಳೀಯ ಶಾಸಕ ಎಚ್‌.ವೈ. ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ಸೋಮವಾರ ಜನತಾ ದರ್ಶನದಲ್ಲಿ ಸಾಲಿನಲ್ಲಿ ನಿಂತು ಸಚಿವ ಆರ್‌.ಬಿ.ತಿಮ್ಮಾಪುರ ಅವರಿಗೆ ಮನವಿಪತ್ರ ಸಲ್ಲಿಸಿದರು.

‘ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಬಾದಾಮಿ ತಾಲ್ಲೂಕಿನ ಕಳ್ಳಿಗುಡ್ಡ, ನಿಂಬಲಗುಂದಿ ಗ್ರಾಮದಲ್ಲಿ ಹಾಸು ಕಲ್ಲುಗಳಿವೆ. ವೈಯಕ್ತಿಕ ಶೌಚಾಲಯ ನಿರ್ಮಾಣ ಕಷ್ಟ. ಅದಕ್ಕೆ ಸಾಮೂಹಿಕ ಶೌಚಾಲಯ ನಿರ್ಮಿಸಬೇಕು’ ಎಂದು ಬಾಯಕ್ಕ ಕೋರಿದರು.

ADVERTISEMENT

‘ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ವೇಳೆಯೂ ಶೌಚಾಲಯ ನಿರ್ಮಾಣ ಸಾಧ್ಯವಾಗಿರಲಿಲ್ಲ. ಜನ ಸಂಕಷ್ಟ ಎದುರಿಸುತ್ತಿದ್ದು, ಶೌಚಾಲಯ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ವೇದಿಕೆ ಮೇಲಿದ್ದ ಶಾಸಕ ಎಚ್.ವೈ.ಮೇಟಿ ಕೂಡ ಪುತ್ರಿಯ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.