ರಬಕವಿ ಬನಹಟ್ಟಿ: ‘ದೇಶ ಕಂಡ ಅಪ್ರತಿಮ ವಿಜ್ಞಾನಿ ಹಾಗೂ ಕ್ಷಿಪಣಿ ವ್ಯಕ್ತಿ ಎಂದೇ ಖ್ಯಾತರಾದ ಅಬ್ದುಲ್ ಕಲಾಂ ಬಗ್ಗೆ ಪ್ರತಿಯೊಬ್ಬರೂ ಗೌರವ ಪಡಬೇಕು’ ಎಂದು ಸಮೀಪದ ಹೊಸೂರಿನ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅಲ್ಪ ಸಂಖ್ಯಾತ ವಿವಿಧೋದ್ದೇಶಗಳ ಹಾಗೂ ಗ್ರಾಮೀಣ ಸೇವಾ ಸಂಸ್ಥೆಯ ಅಧ್ಯಕ್ಷ ಸಿರಾಜ ಹೊರಟ್ಟಿ ತಿಳಿಸಿದರು.
ಮಂಗಳವಾರ ಸಮೀಪದ ಹೊಸೂರಿನ ದರ್ಗಾ ಬಳಿ ಹಮ್ಮಿಕೊಳ್ಳಲಾದ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೊಸೂರಿನ ಶಂಕರಾನಂದ ಮಠದ ಪರಮಾನಂದ ಸ್ವಾಮೀಜಿ, ಹಾರುಣಸಾಬ್ ಹೊರಟ್ಟಿ, ನೂರಸಾಬ್ ಮುಜಾವರ, ಅಬ್ದುಲ್ ಹೊರಟ್ಟಿ, ಹಸನ್ ಜಮಾದಾರ, ಹಾಫೀಜ್ ಹೊರಟ್ಟಿ, ಬುರಾಣ್ ಫತ್ತೆ, ಶಾರು ಹೊರಟ್ಟಿ, ಚಾಂದ ಹುಡೇದಮನಿ, ರಿಯಾಜ್ ಜಮಖಂಡಿ, ಶರೋಫ್ ಫಣಿಬಂದ್, ಇಮಾಮ್ ಹುಡೇದಮನಿ, ಫರೀದಅತ್ತಾರ, ದಿಲವಾರ ಫಣಿಬಂದ, ಅಬೂಬಕರ ಹೊರಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.