ADVERTISEMENT

ಯುಗಾದಿ ಬಳಿಕ ನಿರ್ಧಾರ ಪ್ರಕಟಿಸುವೆ: ವೀಣಾ ಕಾಶಪ್ಪನವರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 15:37 IST
Last Updated 6 ಏಪ್ರಿಲ್ 2024, 15:37 IST
<div class="paragraphs"><p>ವೀಣಾ ಕಾಶಪ್ಪನವರ</p></div>

ವೀಣಾ ಕಾಶಪ್ಪನವರ

   

ಬಾಗಲಕೋಟೆ: ‘ಚುನಾವಣಾ ಪ್ರಚಾರಕ್ಕೆ ಹೋಗದೆ ತಟಸ್ಥೆ ಆಗಿರುವೆ. ಯುಗಾದಿ ಬಳಿಕ ನಿರ್ಧಾರ ಪ್ರಕಟಿಸುವೆ. ನನ್ನ ಹೋರಾಟ ನಾಯಕರ ವಿರುದ್ಧವೇ ಹೊರತು ಪಕ್ಷದ ವಿರುದ್ಧ ಅಲ್ಲ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪನವರ ಹೇಳಿದರು.

ನವನಗರದಲ್ಲಿ ಶನಿವಾರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ‘ಬೆಂಬಲಿಗರ ಸಭೆ ರದ್ದಾಗಿದೆಯೆಂದು ಹೇಳಿ ವದಂತಿ ಹರಡಿ ಮುಖಂಡರು, ಕಾರ್ಯಕರ್ತರು ಬಾರದಂತೆ ಕುತಂತ್ರ ಮಾಡಿದ್ದಾರೆ’ ಎಂದರು.

ADVERTISEMENT

‘ಜಿಲ್ಲೆಯ ಶಾಸಕರ ಗೆಲುವಿಗಾಗಿ ಶ್ರಮಿಸಿದ್ದೇನೆ. ಆದರೆ, ಅವರು ನನ್ನ ಹೆಸರು ಹೇಳಿಲ್ಲ. ಶಾಸಕರಿಗೆ ಮಾಡಿದ ಅನ್ಯಾಯ ಏನು? ಪಕ್ಷದ ಪರ ಕೆಲಸ ಮಾಡಿದ್ದು ತಪ್ಪೇ? ಯಾಕೆ ನನಗೆ ಅನ್ಯಾಯ ಮಾಡಲಾಯಿತು’ ಎಂದು ಅವರು ಪ್ರಶ್ನಿಸಿದರು.

‘ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಿಗುತ್ತಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹಾಗೂ ಸಂಯುಕ್ತಾ ಪಾಟೀಲ ಹೇಳಿದ್ದಾರೆ. ನಾನೇನೂ ವಿದೇಶಕ್ಕೆ ಹೋಗಿಲ್ಲ. ಮೊಬೈಲ್‌ ಫೋನ್‌ಗೂ ಯಾವ ಕರೆಯು ಬಂದಿಲ್ಲ’ ಎಂದರು.

‘ಪತಿ ಬಂದರೆ ಪತ್ನಿ ಬರುತ್ತಾರೆ ಎಂಬ ಉಡಾಫೆ ಹೇಳಿಕೆ ಸರಿಯಲ್ಲ. ರಾಜಕೀಯಕ್ಕೆ ತರುವಲ್ಲಿ ಪತಿ ಪಾತ್ರ ಮುಖ್ಯ ಇದೆ. ನಂತರ ಹೆಸರು ಗಳಿಸಲು ಶ್ರಮಿಸಿದ್ದೇನೆ. ನಾನು ಹಣಕ್ಕಾಗಿ ರಾಜಕಾರಣ ಮಾಡುತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.