ADVERTISEMENT

ಮಹಾಲಿಂಗಪುರ: ಪ್ರತಿ ಟನ್ ಕಬ್ಬಿಗೆ ₹3 ಸಾವಿರ ಘೋಷಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 15:22 IST
Last Updated 9 ನವೆಂಬರ್ 2024, 15:22 IST
ಮಹಾಲಿಂಗಪುರ ಸಮೀಪದ ಸಮೀರವಾಡಿಯ ಗೋದಾವರಿ ರಿಫೈನರೀಜ್ ಲಿ. ನ 2024-25ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭದ ಅಂಗವಾಗಿ ಶನಿವಾರ ಕೇನ್ ಕ್ಯಾರಿಯರ್ ಪೂಜಾ ಸಮಾರಂಭ ನಡೆಯಿತು 
ಮಹಾಲಿಂಗಪುರ ಸಮೀಪದ ಸಮೀರವಾಡಿಯ ಗೋದಾವರಿ ರಿಫೈನರೀಜ್ ಲಿ. ನ 2024-25ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭದ ಅಂಗವಾಗಿ ಶನಿವಾರ ಕೇನ್ ಕ್ಯಾರಿಯರ್ ಪೂಜಾ ಸಮಾರಂಭ ನಡೆಯಿತು    

ಮಹಾಲಿಂಗಪುರ: ಪ್ರಸಕ್ತ ಸಾಲಿಗೆ ಕಾರ್ಖಾನೆಗೆ ಪೂರೈಸುವ ಪ್ರತಿ ಟನ್ ಕಬ್ಬಿಗೆ ₹3 ಸಾವಿರ ನೀಡಲು ಸಮೀಪದ ಸಮೀರವಾಡಿಯ ಗೋದಾವರಿ ರಿಫೈನರೀಜ್ ಲಿ. ನ ಆಡಳಿತ ಮಂಡಳಿ ನಿರ್ಧರಿಸಿದೆ.

ಕಾರ್ಖಾನೆ ಆವರಣದಲ್ಲಿ 2024-25ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭದ ಅಂಗವಾಗಿ ಶನಿವಾರ ಹಮ್ಮಿಕೊಂಡ ಕೇನ್ ಕ್ಯಾರಿಯರ್ ಪೂಜಾ ಸಮಾರಂಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್.ಭಕ್ಷಿ ಮಾತನಾಡಿ, ‘ಪ್ರಸಕ್ತ ಸಾಲಿಗೆ 29 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ರೈತರು ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬು ನೀಡಿ ಈ ಸಾಲಿನ ಹಂಗಾಮನ್ನು ಯಶಸ್ವಿಗೊಳಿಸಬೇಕು’ ಎಂದರು.

ಇದಕ್ಕೂ ಮುನ್ನ ಕಾರ್ಖಾನೆ ಆವರಣದಲ್ಲಿ ಗಣಪತಿ ಹೋಮ ನೆರವೇರಿತು. ಶಿವಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಸಕ್ತ ಸಾಲಿಗೆ ನಿವೃತ್ತರಾಗುವ ಕಾರ್ಖಾನೆ ನೌಕರರನ್ನು ಸನ್ಮಾನಿಸಲಾಯಿತು.

ADVERTISEMENT

ರೈತ ಮುಖಂಡರಾದ ರಾಮನಗೌಡ ಪಾಟೀಲ, ರಂಗನಗೌಡ ಪಾಟೀಲ, ಮಹಾಲಿಂಗಪ್ಪ ಸನದಿ, ಲಕ್ಷ್ಮಣ ಹುಚರೆಡ್ಡಿ, ಬಿ.ಜಿ.ಹೊಸೂರ, ಮಹಾದೇವ ನಾಡಗೌಡರ, ರಾಮಣ್ಣ ಮಳಲಿ, ಭುಜಬಲಿ ಕೆಂಗಾಲಿ, ಈರಪ್ಪ ಕನಕರಡ್ಡಿ, ಮಹಾದೇವ ಮಾರಾಪುರ, ವಿಠ್ಠಲ ಹೊಸಮನಿ, ರವಿ ಬ್ಯಾಳಿ, ಶಿವಲಿಂಗಪ್ಪ ಕೌಜಲಗಿ, ಭೀಮಶಿ ಮಗದುಮ್, ವಿ.ಕೆ.ಪಾಟೀಲ, ಮುತ್ತಪ್ಪ ಪಟ್ಟಣಶೆಟ್ಟಿ, ಮಲ್ಲಪ್ಪ ಗುರುವ, ಯಮನಪ್ಪ ಉಪ್ಪಾರ, ಬಸವರಾಜ ಮುಕುಂದ ಹಾಗೂ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.