ಮಹಾಲಿಂಗಪುರ: ಸಮೀಪದ ರನ್ನಬೆಳಗಲಿಯಲ್ಲಿ ಕಲ್ಯಾಣ ಚಾಲುಕ್ಯರ ಕಾಲಾವಧಿಯಲ್ಲಿನ ಪ್ರಾಚೀನ ಶಿಲ್ಪ ಪತ್ತೆಯಾಗಿದೆ.
ಯಂಕಪ್ಪ ಕ್ವಾಣ್ಯಾಗೋಳ (ಹಂಚಿನಾಳ) ಅವರ ಮನೆ ದುರಸ್ತಿ ಮಾಡುವಾಗ ಗೋಡೆಯಲ್ಲಿ ಶಿಲ್ಪ ದೊರೆತಿದ್ದು, ಇದನ್ನು ಗಮನಿಸಿದ ವಿದ್ಯಾರ್ಥಿನಿ ಅಮೃತಾ ಮಹಾಲಿಂಗಪ್ಪ ಕುಂಬಾರ ಅವರು ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಗೆ ತಂದುಕೊಟ್ಟಿದ್ದಾರೆ.
ಕಪ್ಪು ಶಿಲೆ ಹೊಂದಿರುವ ದೇವಿ ಶಿಲ್ಪ, 14 ಸೆಂ.ಮೀ. ಎತ್ತರ, ಕೆಳಭಾಗದಲ್ಲಿ ಅಗಲ 8 ಸೆಂ.ಮೀ., ಅಗಲದ ಮಧ್ಯಭಾಗದಲ್ಲಿ 9 ಸೆಂ.ಮೀ, ಮೇಲ್ಭಾಗ 6 ಸೆಂ.ಮೀ. ಇದೆ ಎಂದು ಶಾಲೆ ಶಿಕ್ಷಕ ಕೆ.ಎ.ಧಡೂತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.