ADVERTISEMENT

ಹುನಗುಂದ ತಾಲ್ಲೂಕು ಗುಡೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಅನ್ನಭಾಗ್ಯ ಅಕ್ಕಿ ವಶ

​ಪ್ರಜಾವಾಣಿ ವಾರ್ತೆ
Published 9 ಜುಲೈ 2018, 16:44 IST
Last Updated 9 ಜುಲೈ 2018, 16:44 IST
   

ಬಾಗಲಕೋಟೆ:ಹುನಗುಂದ ತಾಲ್ಲೂಕಿನ ಗುಡೂರು(ಎಸ್.ಸಿ) ಗ್ರಾಮದಲ್ಲಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಅನ್ನಭಾಗ್ಯದ 6 ಕ್ವಿಂಟಲ್‌ ಅಕ್ಕಿಯನ್ನು ತಹಶೀಲ್ದಾರ್ ಸುಭಾಸ ಸಂಪಗಾವಿ ನೇತೃತ್ವದಲ್ಲಿ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ.

ಗುಡೂರು ಗ್ರಾಮದ ಮಹಾಗುಂಡಪ್ಪ ಅಳವಂಡಿ ಎಂಬ ವ್ಯಕ್ತಿ ಬಿಪಿಎಲ್ ಕಾರ್ಡ್ ಹೊಂದಿದ ಫಲಾನುಭವಿಗಳಿಂದ ₹10ಕ್ಕೆ ಕೆ.ಜಿ ಅಕ್ಕಿ ಖರೀದಿಸಿ ₹12ಕ್ಕೆ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿಯಿಂದ ದಾಳಿ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಷ್ಟೇ ಅಲ್ಲದೇ ಗೃಹ ಬಳಕೆ ಸಿಲಿಂಡರ್ ಬಳಕೆ ಮಾಡುತ್ತಿದ ಹೊಟೆಲ್‌ಗಳ ಮೇಲೆ ದಾಳಿ ಮಾಡಲಾಗಿದ್ದು, ಅಕ್ರಮ ಬಳಕೆಯ 6 ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ.

ADVERTISEMENT

ತಹಶೀಲ್ದಾರ್ ಸುಭಾಸ ಸಂಪಗಾವಿ ಅವರ ನೇತೃತ್ವದ ದಾಳಿಯಲ್ಲಿ ,ಉಪ ತಹಶೀಲ್ದಾರ್ ಎಸ್.ಬಿ.ಕುಂದರಗಿ, ಗ್ರಾಮ ಲೆಕ್ಕಾಧಿಕಾರಿ ಎಸ್.ಸಿ.ಕೊಣ್ಣೂರು ಇದ್ದರು.

ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಅನ್ನಭಾಗ್ಯದ ಅಕ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.