ADVERTISEMENT

ಬಾದಾಮಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗೆ ಶಿಕ್ಷಕರ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 12:23 IST
Last Updated 17 ಮಾರ್ಚ್ 2024, 12:23 IST
ಬಾದಾಮಿ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಎಸ್.ಬಿ.ಸಿ. ಬಾಲಕಿಯರ ಪ್ರೌಢ ಶಾಲೆಯ ಸಿಬ್ಬಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರ ಅಭ್ಯಾಸದ ಪ್ರಗತಿಗೆ ಮನೆ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಲಹೆ ನೀಡಿದರು.
ಬಾದಾಮಿ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಎಸ್.ಬಿ.ಸಿ. ಬಾಲಕಿಯರ ಪ್ರೌಢ ಶಾಲೆಯ ಸಿಬ್ಬಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರ ಅಭ್ಯಾಸದ ಪ್ರಗತಿಗೆ ಮನೆ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಲಹೆ ನೀಡಿದರು.   

ಬಾದಾಮಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸಿದ್ದು, ವಿದ್ಯಾರ್ಥಿನಿಯರ ಅಭ್ಯಾಸದ ಪ್ರಗತಿಗೆ ಪ್ರೇರಣೆ ನೀಡಲು ಶಾಲೆಯ ಶಿಕ್ಷಕ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಪೋಷಕರಿಗೆ ಮತ್ತು ಮಕ್ಕಳಿಗೆ ತಿಳಿವಳಿಕೆ ನೀಡಿದರು.

ಇಲ್ಲಿನ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಎಸ್.ಬಿ.ಸಿ. ಬಾಲಕಿಯರ ಪ್ರೌಢ ಶಾಲೆಯ ಶಿಕ್ಷಕ ಸಿಬ್ಬಂದಿ ವಾರದಿಂದ ಗ್ರಾಮೀಣ ಪ್ರದೇಶ ಮತ್ತು ಪಟ್ಟಣದ ಅನೇಕ ಮನೆಗಳಿಗೆ ಭಾನುವಾರ ಭೇಟಿ ನೀಡಿದರು.

‘ಪರೀಕ್ಷೆ ಮುಗಿಯುವವರೆಗೆ ಹೆಣ್ಣುಮಕ್ಕಳಿಂದ ಹೆಚ್ಚು ಕೆಲಸ ಮಾಡಿಸದೇ ಅಭ್ಯಾಸ ಮಾಡುವಂತೆ ಹೇಳಿ. ಓದಲು ಮಕ್ಕಳನ್ನು ಬೆಳಿಗ್ಗೆ ಬೇಗ ಎಚ್ಚರಿಸಿ. ಮಕ್ಕಳು ಸಂಭ್ರಮದಿಂದ ಪರೀಕ್ಷೆಯನ್ನು ಬರೆಯಲಿ’ ಎಂದು ಶಿಕ್ಷಕರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.