ಬಾಗಲಕೋಟೆ: ಜಿಲ್ಲೆಯ ಎರಡು ಕಡೆ ಅಕ್ರಮವಾಗಿ ಸಾಗಿಸುತ್ತಿದ್ದ ₹9.84 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.
ಹುನಗುಂದ ವಲಯದ ಕೂಡಲಸಂಗಮ ಕ್ರಾಸ್ ನಲ್ಲಿ ₹75,526 ಮೌಲ್ಯದ 10.80 ಲೀಟರ್ ಮದ್ಯ, ಮುಧೋಳ ವಲಯದ ದಾದನಟ್ಟಿ ಕ್ರಾಸ್ನಲ್ಲಿ ₹9.09 ಲಕ್ಷ ಮೌಲ್ಯದ 40.50 ಲೀಟರ್ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಾದ ಶಂಕರಯ್ಯ ಸರಗಣಾಚಾರಿ ಹಾಗೂ ಬಸವನ ಬಾಗೆವಾಡಿಯ ಆಕಾಶ ಅಂದೊಡಗಿ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎಂ. ಜಾನಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.