ADVERTISEMENT

ಬನಶಂಕರಿದೇವಿ ದೇವಿ ಜಾತ್ರೆ ರದ್ದು: ಭಕ್ತರ ಪ್ರವೇಶಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 12:08 IST
Last Updated 23 ಜನವರಿ 2021, 12:08 IST
ಬನಶಂಕರಿ ದೇವಾಲಯಕ್ಕೆ ಭಕ್ತರು ಪ್ರವೇಶಿಸದಂತೆ ಹೊರವಲಯದ ಬಾದಾಮಿ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.
ಬನಶಂಕರಿ ದೇವಾಲಯಕ್ಕೆ ಭಕ್ತರು ಪ್ರವೇಶಿಸದಂತೆ ಹೊರವಲಯದ ಬಾದಾಮಿ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.   

ಬಾದಾಮಿ: ಜ.28ರಂದು ನಡೆಯಬೇಕಿದ್ದ ಬನಶಂಕರಿದೇವಿ ಜಾತ್ರೆಯನ್ನು ಕೋವಿಡ್ ಕಾರಣದಿಂದರದ್ದುಪಡಿಸಲಾಗಿದ್ದು, ಬನಶಂಕರಿ ದೇವಿಯ ದರ್ಶನಕ್ಕೆ ಭಕ್ತರು ಬರದಂತೆ ಜ.31ರವರೆಗೆ ನಿರ್ಬಂಧ ವಿಧಿಸಲಾಗಿದೆ.

ದೇವಾಲಯದ ಮಹಾದ್ವಾರವನ್ನು ಬಂದ್ ಮಾಡಲಾಗಿದೆ. ಭಕ್ತರು ದೇವಾಲಯಕ್ಕೆ ಪ್ರವೇಶಿಸದಂತೆ ತಡೆಯಲು ಬಾದಾಮಿ ರಸ್ತೆ, ಗದಗ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.

‘ಜಿಲ್ಲಾಧಿಕಾರಿ ಆದೇಶದಂತೆ ಈ ವರ್ಷದ ಜಾತ್ರೆಯನ್ನು ರದ್ದು ಮಾಡಲಾಗಿದೆ. ಭಕ್ತರು ಪಾದಯಾತ್ರೆ ಮತ್ತು ವಾಹನಗಳ ಮೂಲಕ ಬನಶಂಕರಿಗೆ ಬರಬಾರದು. ಮನೆಯಲ್ಲಿಯೇ ದೇವಿಯನ್ನು ಆರಾಧಿಸಬೇಕು’ ಎಂದು ಪಿಎಸ್ಐ ಪ್ರಕಾಶ ಬಣಕಾರ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.