ADVERTISEMENT

ತಂತ್ರಜ್ಞಾನ ಯುಗದಲ್ಲಿಯೂ ಮೌಢ್ಯ ಆಚರಣೆ: ಶಾಸಕ ಸಿದ್ದು ಸವದಿ ವಿಷಾದ

​ಪ್ರಜಾವಾಣಿ ವಾರ್ತೆ
Published 11 ಮೇ 2024, 15:37 IST
Last Updated 11 ಮೇ 2024, 15:37 IST
ಬಸವ ಜಯಂತಿ ಅಂಗವಾಗಿ ತೇರದಾಳದ ಬಸವೇಶ್ವರ ವೃತ್ತದಲ್ಲಿ ನಡೆದ ಪೂಜೆಯಲ್ಲಿ ಗಣ್ಯರು ಪಾಲ್ಗೊಂಡಿದ್ದರು
ಬಸವ ಜಯಂತಿ ಅಂಗವಾಗಿ ತೇರದಾಳದ ಬಸವೇಶ್ವರ ವೃತ್ತದಲ್ಲಿ ನಡೆದ ಪೂಜೆಯಲ್ಲಿ ಗಣ್ಯರು ಪಾಲ್ಗೊಂಡಿದ್ದರು   

ತೇರದಾಳ: 12ನೇ ಶತಮಾನದಲ್ಲಿಯೇ ಬಸವಣ್ಣ ಸಾಮಾಜಿಕ ಕ್ರಾಂತಿ ಮಾಡಿ, ಮೌಢ್ಯ ತೊಲಗಿಸುವಲ್ಲಿ ಹಿರಿಯ ಪಾತ್ರ ವಹಿಸಿದ್ದರು. ಇಂದಿನ ತಂತ್ರಜ್ಞಾನದ ಯುಗದಲ್ಲಿಯೂ ನಾವು ಇನ್ನೂ ಮೌಢ್ಯತೆಯನ್ನು ಆಚರಿಸುತ್ತಿರುವುದು ವಿಷಾದನೀಯ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಬಸವೇಶ್ವರ ಜಯಂತಿ ಅಂಗವಾಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬಸವಣ್ಣ ಜಾತಿ, ಭೇದ ಹೋಗಲಾಡಿಸಲು ನಿರಂತರವಾಗಿ ಹೋರಾಟ ನಡೆಸಿದರು. ಆದರೆ ಇಂದು ನಮ್ಮ ಸ್ವಾರ್ಥಕ್ಕಾಗಿ ಜಾತಿಯನ್ನು ಬಳಸುತ್ತಿರುವುದು ನೋವಿನ ಸಂಗತಿ. ಬರೀ ಜಾತಿಯಿಂದ ಸಾಧನೆ ಮಾಡುತ್ತೇನೆ ಎಂದರೆ ಅದು ಎಂದಿಗೂ ಸಾಧ್ಯ ಇಲ್ಲ. ಎಲ್ಲರೂ ನಮ್ಮವರು ಎಂದಾಗ ಮಾತ್ರ ಸಮೃದ್ಧ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹೇಳಿದರು.

ADVERTISEMENT

ಮಂಜುನಾಥ ಜಮಖಂಡಿಹಿರೇಮಠ ಬಸವೇಶ್ವರ ಪುತ್ಥಳಿಗೆ ಪೂಜೆ ಸಲ್ಲಿಸಿದರು.

ಸಂತೋಷ ಜಮಖಂಡಿ, ಶಂಕರ ಕುಂಬಾರ, ಕೇದಾರಿ ಪಾಟೀಲ, ರಾಮಣ್ಣ ಹಿಡಕಲ್, ಸಂಗಮೇಶ ಕಾಲತಿಪ್ಪಿ ಇದ್ದರು.

ರಾಂಪುರ ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ಶುಕ್ರವಾರ ಬಸವ ಜಯಂತಿ ನಿಮಿತ್ತವಾ ರೈತರು ಎತ್ತುಗಳ ಮೆರವಣಿಗೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.