ಕುಳಗೇರಿ ಕ್ರಾಸ್: ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಸುಕ್ಷೇತ್ರ ಕುಳಗೇರಿ ಗ್ರಾಮದ ಭಂಡಾರ ಜಾತ್ರೆ ಎಂದೇ ಪ್ರಸಿದ್ಧಿಯಾದ ಬೀರದೇವರ ಜಾತ್ರಾ ಮಹೋತ್ಸವವು ಅ.31ರಿಂದ ನ.6ರ ವರೆಗೆ ನಡೆಯಲಿದೆ.
ಅ.31ರಂದು ಭರಮದೇವರ ಹಬ್ಬ ಪ್ರಾರಂಭವಾಗಲಿದ್ದು, ನ.1ರಂದು ಪಲ್ಲಕ್ಕಿ ಉತ್ಸವ, 2ರಂದು ವಾಹನೋತ್ಸವ ಹಾಗೂ ದೀಪೋತ್ಸವ ನಡೆಯಲಿದ್ದು, ರಾತ್ರಿ ಡೊಳ್ಳಿನ ಪದಗಳು ಜರುಗಲಿವೆ. 3ರಂದು ಪುಷ್ಪ ಪೂಜಾ, ಸಂಜೆ ಬೀರದೇವರ ಮಹಾ ರಥೋತ್ಸವ, ಅನ್ನಸಂತರ್ಪಣೆ, ರಾತ್ರಿ ಡೊಳ್ಳಿನ ಪದಗಳು ಜರುಗಲಿವೆ.
4ರಂದು ಭಂಡಾರ ಒಡೆಯುವುದು, 7 ರಿಂದ 8 ತಿಂಗಳ ಮರಿಗಳ ‘ಟಗರಿನ ಕಾಳಗ’ ಜರುಗಲಿದೆ. 5ರಂದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹಾಲಶಿರೂರ ಗ್ರಾಮದ ಅಮೋಘ ಸಿದ್ದೇಶ್ವರ ಡೊಳ್ಳಿನ ಗಾಯನ ಸಂಘದವರಿಂದ ಜಿದ್ದಾಜಿದ್ದಿನ ಡೊಳ್ಳಿನ ಪದಗಳು ಹಾಗೂ 45 ಕೆ.ಜಿ ತೂಕದ ಒಳಗಿನವರ ಕಬಡ್ಡಿ ಪಂದ್ಯಾವಳಿಗಳು, ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮದ ಬೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘದವರಿಂದ ಜಿದ್ದಾಜಿದ್ದಿನ ಡೊಳ್ಳಿನ ಪದಗಳು ಜರುಗಲಿವೆ.
6ರಂದು ಕಳಸ ಇಳಿಸುವುದು, 4 ಹಾಲು ಹಲ್ಲಿನ ಟಗರಿನ ಕಾಳಗ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.