ಸಿಂದಗಿ: ಪಟ್ಟಣದ ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಪ್ರತಿ ವರ್ಷ ಕೊಡ ಮಾಡುವ ₹ 1 ಲಕ್ಷ ಮೊತ್ತದ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿಯನ್ನು ಈ ವರ್ಷ ಮೈಸೂರಿನ ಕೃಷಿ ವಿಜ್ಞಾನಿ ಡಾ.ಎಸ್.ಅಯ್ಯಪ್ಪನ್ ಅವರಿಗೆ ನ. 25 ರಂದು ಸಂಜೆ 6.30ಕ್ಕೆ ಸಾರಂಗಮಠದ ಆವರಣದಲ್ಲಿ ಪ್ರದಾನ ಮಾಡಲಾಗುವುದು.
ಸಾರಂಗಮಠ-ಗಚ್ಚಿನಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡುವರು.
ಜಮಖಂಡಿ-ಕೊಣ್ಣೂರ ಹೊರಗಿನ ಕಲ್ಯಾಣಮಠದ ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು. ಸಿಂದಗಿ ಶಾಸಕ ಅಶೋಕ ಮನಗೂಳಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳುವರು.
ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಆಲೂರು, ಮಾಜಿ ಶಾಸಕ ರಮೇಶ ಭೂಸನೂರ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿಜಯಪುರ ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿ ಭೀಮಪ್ಪ, ವಿಜಯಪುರದ ರವೀಂದ್ರ ಬೆಳ್ಳಿ, ಅಣ್ಣಿಗೇರಿಯ ಬಿ.ಎನ್.ಮೋಟಗಿ, ವಿಜಯಪುರದ ಅಶೋಕ ಸಜ್ಜನ, ಪ್ರಶಸ್ತಿ ದಾನಿಗಳಾದ ಅಂತರರಾಷ್ಟ್ರೀಯ ಫೈನ್ ಆರ್ಟ್ ಕಲಾವಿದರಾದ ಸಿಂದಗಿ ಪಟ್ಟಣದ ನವದೆಹಲಿ ನಿವಾಸಿಗಳಾದ ಪೂಜಾ ಮತ್ತು ಈರಣ್ಣ ಗೋಲಪ್ಪ ರುಕುಂಪುರ ಅವರನ್ನು ಗೌರವಿಸಲಾಗುವುದು ಎಂದು ಪ್ರತಿಷ್ಠಾನ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.