ADVERTISEMENT

ಸರ್ಕಾರಿ ಶಾಲೆ ಮಕ್ಕಳಿಗೆ ತಟ್ಟೆ ವಿತರಿಸಿ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 15:10 IST
Last Updated 5 ಜೂನ್ 2024, 15:10 IST
ತೇರದಾಳ ತಾಲ್ಲೂಕಿನ ಕಾಲತಿಪ್ಪಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ಥಳೀಯ ಯುವ ಮುಖಂಡ ಶಂಕರ ಉಗಾರ ತಮ್ಮ ಜನ್ಮದಿನದ ಅಂಗವಾಗಿ ತಟ್ಟೆಗಳನ್ನು ವಿತರಿಸಿದರು
ತೇರದಾಳ ತಾಲ್ಲೂಕಿನ ಕಾಲತಿಪ್ಪಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ಥಳೀಯ ಯುವ ಮುಖಂಡ ಶಂಕರ ಉಗಾರ ತಮ್ಮ ಜನ್ಮದಿನದ ಅಂಗವಾಗಿ ತಟ್ಟೆಗಳನ್ನು ವಿತರಿಸಿದರು   

ತೇರದಾಳ: ತಾಲ್ಲೂಕಿನ ಕಾಲತಿಪ್ಪಿಯ ಯುವ ಮುಖಂಡ ಶಂಕರ ಉಗಾರ ತಮ್ಮ ಜನ್ಮದಿನದ ಅಂಗವಾಗಿ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟಕ್ಕಾಗಿ ₹7 ಸಾವಿರ ಮೌಲ್ಯದ 100 ಸ್ಟೀಲ್ ತಟ್ಟೆಗಳನ್ನು ವಿತರಿಸಿದ್ದಾರೆ.

ಶಂಕರ ಅವರು ಈ ಹಿಂದೆಯೂ ಇದೇ ಶಾಲೆಯ ಮಕ್ಕಳಿಗೆ ಅಧ್ಯಯನ ಸಾಮಾಗ್ರಿಗಳನ್ನು ವಿತರಿಸಿ ಜನ್ಮದಿನ ಆಚರಿಸಿಕೊಂಡಿದ್ದರು.

ಶಾಲೆಯ ಶಿಕ್ಷಕ ರಾಮು ಕೊಣ್ಣೂರ, ‘ಸರ್ಕಾರಿ ಶಾಲೆಗಳಿಗೆ ಸರ್ಕಾರವೇ ಸೌಲಭ್ಯಗಳನ್ನು ನೀಡಲಿ ಎಂದು ಬಯಸದೆ ತಮ್ಮಿಂದಲೂ ಸಾಧ್ಯವಾದಷ್ಟು ಕೊಡುಗೆ ನೀಡುವ ಗಣ್ಯರು ಇಲ್ಲಿರುವುದು ಖುಷಿ ತಂದಿದೆ’ ಎಂದರು.

ADVERTISEMENT

ಶಂಕರ ಉಗಾರ ಅವರನ್ನು ಗೌರವಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ರಾಜು ಲಟ್ಟಿ, ವಿಠ್ಠಲ ಸವಸುದ್ದಿ, ಚಂದ್ರಶೇಖರ ಸನದಿ, ಹಣಮಂತ ಲಟ್ಟಿ, ಮಹೇಶ ತಿಮ್ಮಾಪೂರ, ಮುಖ್ಯ ಶಿಕ್ಷಕ ಎಂ.ಎಸ್. ಬಿರಾದಾರ, ಸುಜಾತಾ ಬಿರಾದಾರ, ಗೀತಾ ಪಾಟೀಲ, ತ್ರಿಶಲಾ ಉಗಾರೆ, ಪ್ರೇಮಾ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.