ಇಳಕಲ್: ನಗರದ ಮದೀನಾ ಗಲ್ಲಿಯ ಜನತ್ ನಗರದಲ್ಲಿ ಎಸ್ಆರ್‌ಕೆ ಪ್ರತಿಷ್ಠಾನದಿಂದ ರಂಜಾನ್ ಅಂಗವಾಗಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸಾವಿರ ವರ್ಷಗಳಿಂದ ಹಿಂದೂಗಳು, ಮುಸ್ಲಿಮರು ನಮ್ಮ ದೇಶದಲ್ಲಿ ಸೌಹಾರ್ದದಿಂದ ಬದುಕುತ್ತಿದ್ದಾರೆ. ಸ್ವಾತಂತ್ರ್ಯ ನಂತರ ಎಲ್ಲ ಧರ್ಮೀಯರು ಒಂದಾಗಿ ಈ ದೇಶವನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.
ಶಾಂತಿ, ಸೌಹಾರ್ದದಿಂದಾಗಿ ಪ್ರಪಂಚಕ್ಕೆ ಮಾದರಿಯಾಗಿದ್ದ ದೇಶದಲ್ಲಿ ರಾಜಕೀಯ ಕಾರಣಕ್ಕಾಗಿ ಬಿಜೆಪಿ ಅಶಾಂತಿ, ಗಲಭೆ ಸೃಷ್ಟಿಸುತ್ತಿದೆ. ಕೋಮುವಾದಿಗಳ ಶಕ್ತಿ ಹೆಚ್ಚುತ್ತಿರುವ ಕಾರಣ ಶೋಷಿತರು, ಅಲ್ಪಸಂಖ್ಯಾತರು ಆತಂಕಕ್ಕೆ ಒಳಗಾಗಿದ್ದಾರೆ. ದೇಶದ ಏಕತೆ ದೃಷ್ಟಿಯಿಂದ ವಿವಿಧ ಧರ್ಮೀಯರು ಪರಸ್ಪರ ದ್ವೇಷ ಮಾಡದೇ ಎಲ್ಲರೂ ಒಂದಾಗಿ ಬಾಳಬೇಕಿದೆ ಎಂದು ಹೇಳಿದರು.
ಮಂಗಳೂರಿನ ಮೌಲಾನಾ ಫಾರುಕ್ ಸಖಾಫಿ ಅವರು ದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣುತೆ, ಅಶಾಂತಿಯ ಬಗ್ಗೆ ಮಾತನಾಡಿದರು. ದರ್ಗಾದ ಸಜ್ಜಾದ ನಸೀನ್ ಹಜರತ್ ಸೈಯ್ಯದ್ ಶಾ ಫೈಸಲ್ ಪಾಷಾ, ಮೌಲಾನಾ ನೂರ್ ಮಹಮ್ಮದ ರಬ್ಬಾನಿ ಸಾನ್ನಿಧ್ಯ ವಹಿಸಿದ್ದರು.
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ,ಡಾ. ಬಾಬಾಸಾಹೇಬ್‌ಅಂಬೇಡ್ಕರ್ ದಲಿತ ಹಿತ-ರಕ್ಷಣಾ ವೇದಿಕೆ ಅಧ್ಯಕ್ಷ ಶರಣಪ್ಪ ಆಮದಿಹಾಳ, ಕಾಂಗ್ರೆಸ್ ಮುಖಂಡರಾದ ವೆಂಕಟೇಶ ಸಾಕಾ, ಅರುಣ ಬಿಜ್ಜಲ, ಜಬ್ಬಾರ್ ಕಲಬುರ್ಗಿ, ಮಹಾಂತಪ್ಪ ಕಡಿವಾಲ, ಮೊಹಿದ್ದೀನ್ ಭಾಷಾ ಹುಣಚಗಿ, ಮೆಹಬೂಬ್ ಹವಾಲ್ದಾರ, ದಾವಲಸಾಬ ಜಮಖಾನ, ನಬೀಸಾಬ ಕಂದಗಲ್ಲ, ಮೊಹಮ್ಮದ ಯಸೂಫ್ ಕಟಂಬ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.