ADVERTISEMENT

ರಾಷ್ಟ್ರಮಟ್ಟದ ಸ್ಪರ್ಧೆಗೆ ಚಿಕನಾಳ ಶಾಲೆ

ಗುಣಮಟ್ಟದಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಶಿ.ಗು.ಹಿರೇಮಠ
Published 28 ಜೂನ್ 2021, 14:51 IST
Last Updated 28 ಜೂನ್ 2021, 14:51 IST
ಚಿಕನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ
ಚಿಕನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ   

ಅಮೀನಗಡ: ಇಳಕಲ್ ತಾಲ್ಲೂಕಿನ ಚಿಕನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಶೈಕ್ಷಣಿಕ ಗುಣಮಟ್ಟದಲ್ಲಿ ಪ್ರಗತಿ ಸಾಧಿಸಿದೆ.

ಸರ್ಕಾರಿ ಶಾಲೆಗಳ ಯಶೋಗಾಥೆ ಪ್ರಸ್ತುತಪಡಿಸುವ ವಿಡಿಯೊ ದಾಖಲೀಕರಣ ಸ್ಪರ್ಧೆಯಲ್ಲಿ ಚಿಕನಾಳ ಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ₹5 ಸಾವಿರ ನಗದು ಪುರಸ್ಕಾರದ ಜೊತೆಗೆ ದೆಹಲಿಯಲ್ಲಿ ನಡೆಯುವ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದೆ.

ಸರ್ಕಾರದ ಅನುದಾನದ ಹೊರತಾಗಿ ಶಾಲೆಯು ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ದೇಣಿಗೆ ಪಡೆದುಕೊಂಡಿದೆ. ಧಾರವಾಡ ವಲಯದ ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣೆ ಸಂಸ್ಥೆಯ (ಸಿಸ್ಲೆಪ್) ಮಾರ್ಗದರ್ಶನದಲ್ಲಿ ಶಾಲೆಯ ಸಮಗ್ರ ಅಭಿವೃದ್ಧಿ ಮತ್ತು ಗುಣಮಟ್ಟದ ಕುರಿತು ವಿಡಿಯೊ ದಾಖಲೀಕರಣ ಮಾಡಲಾಗಿದೆ.

ADVERTISEMENT

ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಂದ ಪ್ರಥಮ ಸ್ಥಾನ ಪಡೆದು ಇಳಕಲ್ ಡಯೆಟ್‌ನಿಂದ ಶಿಫಾರಸುಗೊಂಡು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಚಿಕನಾಳ ಪ್ರಾಥಮಿಕ ಶಾಲೆ ಶಾಲಾ ಅಭಿವೃದ್ಧಿ ಯೋಜನೆ ಮತ್ತು ಶಾಲಾ ಸಂಸ್ಕೃತಿ ವಿಷಯದ ಬಗ್ಗೆ ಮಂಡಿಸಿದ ಯಶೋಗಾಥೆಯ ವಿಡಿಯೊ ರಾಷ್ಟ್ರಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಭಾಗವಹಿಸುವ ಅರ್ಹತೆ ಪಡೆದಿದೆ.

ಶಾಲೆಯ ಗುಣಮಟ್ಟ, ಅಭಿವೃದ್ಧಿ, ಶಾಲಾ ಪರಿಸರ, ಸ್ವಚ್ಛತೆ, ಶೌಚಾಲಯ, ಸಂಸ್ಕೃತಿ, ಶೈಕ್ಷಣಿಕ ಚಟುವಟಿಕೆ, ಸಹಭಾಗಿತ್ವ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಎಸ್.ಡಿ.ಎಂ.ಸಿ ಸಹಕಾರ, ಶಿಕ್ಷಕರ ಕಾರ್ಯಗಳು ಹಾಗೂ ಇಲಾಖಾ ಮೇಲಧಿಕಾರಿಗಳ ಸಂದರ್ಶನ ಆಧಾರದ ಮೇಲೆ ಈ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಆ ಕುರಿತು ಆರು ನಿಮಿಷಗಳ ವಿಡಿಯೊ ಚಿತ್ರೀಕರಣ ಮಾಡಿ ಸಿಡಿಯಲ್ಲಿ ದಾಖಲಿಸಲಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.