ಬಾಗಲಕೋಟೆ: ಪಂಜಾಬ್ನಿಂದ ಅಫೀಮು ತಂದು ಬೀಳಗಿ ಪಟ್ಟಣದಲ್ಲಿ ಮಾರಾಟಕ್ಕೆ ಪ್ರಯತ್ನಿಸಿದ ಇಬ್ಬರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.
ಪಂಜಾಬ್ ನ ಪಟಿಯಾಲಾದ ಗುರುಭಕ್ಷ್ ಕಾಲೊನಿಯ ನಿವಾಸಿ ಲಾರಿ ಚಾಲಕ ಭಕ್ಷೀಸ್ ಸಿಂಗ್ (43) ಹಾಗೂ ಲಾರಿಯ ಮಾಲೀಕ ಪ್ರೀತ್ಪಾಲ್ ಸಿಂಗ್ (63) ಬಂಧಿತರು.
ಆರೋಪಿಗಳಿಂದ ₹5 ಲಕ್ಷ ಮೌಲ್ಯದ 10 ಕೆ.ಜಿ ಅಫೀಮು ಪೌಡರ್ ವಶಪಡಿಸಿಕೊಳ್ಳಲಾಗಿದೆ.
ಬೀಳಗಿಯ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ಕ್ಕೆ ಹೊಂದಿಕೊಂಡಿರುವ ಕನಕದಾಸ ವೃತ್ತದಲ್ಲಿ ಗಸ್ತು ನಡೆಸುವಾಗ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.