ADVERTISEMENT

ತೇರದಾಳ | ಇಂದಿರಾ ಕ್ಯಾಂಟೀನ್: ಸ್ಥಳ ಹೊಂದಾಣಿಕೆಯ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 16:11 IST
Last Updated 9 ಜುಲೈ 2024, 16:11 IST
ತೇರದಾಳದ ಕೆರೆಯ ಹತ್ತಿರ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವಂತೆ ಎಂದು ಕಾಂಗ್ರೆಸ್ ಮುಖಂಡರು ತೇರದಾಳ ಪುರಸಭೆ ಮುಖ್ಯಾಧಿಕಾರಿಗೆ ಒತ್ತಾಯಿಸಿದರು
ತೇರದಾಳದ ಕೆರೆಯ ಹತ್ತಿರ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವಂತೆ ಎಂದು ಕಾಂಗ್ರೆಸ್ ಮುಖಂಡರು ತೇರದಾಳ ಪುರಸಭೆ ಮುಖ್ಯಾಧಿಕಾರಿಗೆ ಒತ್ತಾಯಿಸಿದರು   

ತೇರದಾಳ: ‘ಪುರಸಭೆ ಮುಖ್ಯಾಧಿಕಾರಿ ಜನ ಹೆಚ್ಚಾಗಿ ಓಡಾಡದ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಜಾಗ ಗುರುತಿಸಿದ್ದರು’ ಎಂದು ಕಾಂಗ್ರೆಸ್ ಮುಖಂಡರು ಮಂಗಳವಾರ ಆರೋಪಿಸಿದರು.

ಇಂದಿರಾ ಕ್ಯಾಂಟೀನ್‌ಗೆ ಸ್ಥಳ ತೋರಿಸುವಂತೆ ಇಲ್ಲಿಯ ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಅವರನ್ನು ಕೇಳಿದಾಗ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣವನ್ನು ತೋರಿಸಿ, ಸ್ಥಳ ನಿಗದಿಪಡಿಸಿದ್ದರು. ಅದು ಬಸ್ ನಿಲ್ದಾಣದಿಂದ ಸಾಕಷ್ಟು ದೂರವಿರುವುದರಿಂದ ಸಾರ್ವಜನಿಕರಿಗೆ ಅನನುಕೂಲವಾಗುತ್ತದೆ. ಇಲ್ಲಿಯ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯ ಬಳಿಯೇ ಇರುವ ಸ್ಥಳವೇ ಸೂಕ್ತ. ಇಲ್ಲಿಗೆ ಹೋಗಿ ಬರುವವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಬಸ್ ನಿಲ್ದಾಣ, ಉಪನೋಂದಣಿ ಕಚೇರಿ, ಹಲವು ಸಹಕಾರ ಸಂಘಗಳು ಈ ಸ್ಥಳಕ್ಕೆ ಸಮೀಪವಾಗುವುದರಿಂದ ಈ ಸ್ಥಳ ಸೂಕ್ತ ಎಂದು ಕಾಂಗ್ರೆಸ್‌ ಮುಖಂಡರು ಅಭಿಪ್ರಾಯಪಟ್ಟರು.

ಪುರಸಭೆ ಸದಸ್ಯ ಶೆಟ್ಟೆಪ್ಪ ಸುಣಗಾರ, ಪುರಸಭೆ ಮುಖ್ಯಾಧಿಕಾರಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಪುರಸಭೆ ಸದಸ್ಯರ ಗಮನಕ್ಕೆ ತಾರದೇ ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಾಗ ತೋರಿಸಿದ್ದು ಸರಿಯಲ್ಲ ಎಂದರು.

ADVERTISEMENT

ಪುರಸಭೆ ಮಾಜಿ ಅಧ್ಯಕ್ಷ ಹನಮಂತ ರೋಡನ್ನವರ ಮಾತನಾಡಿ, ‘ರಾಜ್ಯ ಹೆದ್ದಾರಿಯ ಬಳಿ ಬಹಳ ವರ್ಷಗಳ ಹಿಂದೆ ಜಾಗ ಅತಿಕ್ರಮಣವಾಗಿತ್ತು. ಅದನ್ನು ಕಾನೂನು ಹೋರಾಟ ಮಾಡಿ ಮರಳಿ ಪಡೆಯಲಾಯಿತು. ಖಾಲಿಯಿರುವ ಕಾರಣಕ್ಕೆ ಮತ್ತೆ ಅತಿಕ್ರಮಣವಾಗುವ ಸಾಧ್ಯತೆ ಇದೆ. ಇಲ್ಲಿಯೇ ಇಂದಿರಾ ಕ್ಯಾಂಟೀನ್ ಆರಂಭಿಸಿದರೆ ಪುರಸಭೆಯ ಆಸ್ತಿಯು ಉಳಿಯುತ್ತದೆ ಹಾಗೂ ಜನರಿಗೆ ಅನೂಕೂಲವಾಗುತ್ತದೆ’ ಎಂದರು.

ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣುರ  ಮಾತನಾಡಿ, ‘ಇದೇ ಜಾಗ ಸೂಕ್ತವೆಂದು ಮುಖಂಡರು ನಿರ್ಧರಿಸಿದ್ದರಿಂದ ಇಲ್ಲಿಯೇ ನಿಮರ್ಾಣವಾಗಲಿ ಎಂದರು. ಎಪಿಎಂಸಿ ಮಾಜಿ ನಿದರ್ೇಶಕ ಪ್ರವೀಣ ನಾಡಗೌಡ, ಅಶೋಕ ಆಳಗೊಂಡ, ಗೌತಮ ರೋಡಕರ, ಪಿ.ಎಸ್.ಮಾಸ್ತಿ, ರಾಜೇಸಾಬ ನಗಾಜರ್ಿ, ಭರಮು ಉಳ್ಳಾಗಡ್ಡಿ, ಮಹೇಶ ಕಾಲತಿಪ್ಪಿ, ಸಂಜು ಹಾಡಕರ, ಫಜಲ ಅತಾರಾವುತ್, ಇಸಾಕ ನಿಪ್ಪಾಣಿ, ಕುಮಾರ ಕಾಂಬಳೆ, ಮಾಶುಂ ಇನಾಂದಾರ, ದಯಾನಂದ ಕಾಳೆ ಸೇರಿದಂತೆ ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.