ADVERTISEMENT

ಅಂಗವಿಕಲರಿಗೆ ಕಲಿಕಾ ಪರಿಕರ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:51 IST
Last Updated 19 ಜೂನ್ 2024, 15:51 IST
ಇಳಕಲ್‌ನ ಆಶಾದೀಪ ಸಂಸ್ಥೆಯಲ್ಲಿ ನಡೆದ  ಕಾರ್ಯಕ್ರಮದಲ್ಲಿ ಅಭ್ಯರ್ಥಿಯೊಬ್ಬರಿಗೆ ಟ್ರೈನ್‌ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಬಸವರಾಜ ಹುಬ್ಬಳ್ಳಿ ಕಲಿಕಾ ಕಿಟ್‌ ವಿತರಿಸಿದರು
ಇಳಕಲ್‌ನ ಆಶಾದೀಪ ಸಂಸ್ಥೆಯಲ್ಲಿ ನಡೆದ  ಕಾರ್ಯಕ್ರಮದಲ್ಲಿ ಅಭ್ಯರ್ಥಿಯೊಬ್ಬರಿಗೆ ಟ್ರೈನ್‌ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಬಸವರಾಜ ಹುಬ್ಬಳ್ಳಿ ಕಲಿಕಾ ಕಿಟ್‌ ವಿತರಿಸಿದರು   

ಇಳಕಲ್ : 'ಹುಬ್ಬಳ್ಳಿಯ ಟ್ರೈನ್‌ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿಯ ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆಯಲ್ಲಿ ಅಂಗವಿಕಲರಿಗೆ ಉಚಿತ ತರಬೇತಿ ಹಾಗೂ ಉದ್ಯೋಗ ಕಲ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆʼ ಎಂದು ಟ್ರೈನ್‌ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಬಸವರಾಜ ಹುಬ್ಬಳ್ಳಿ ಹೇಳಿದರು.

ಇಲ್ಲಿಯ ಆಶಾದೀಪ ಸಂಸ್ಥೆಯ ಕಚೇರಿಯಲ್ಲಿ ಪಂಕ್ ಕಾರ್ಯಕ್ರಮದಡಿ ತರಬೇತಿ ಪಡೆಯುತ್ತಿರುವ ಅಂಗವಿಕಲರಿಗೆ  ಬುಧವಾರ ಉಚಿತ ಕಲಿಕಾ ಪರಿಕರಗಳ ಕಿಟ್ ವಿತರಿಸಿ ಮಾತನಾಡಿದರು.

'ಅಂಗವಿಕಲ ಯುವಕ ಯುವತಿಯರು ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಕೌಶಲಾಧರಿತ ತರಬೇತಿ ಪಡೆದು, ಉದ್ಯೋಗ ಸಂಪಾದಿಸಿ, ಸ್ವಾಭಿಮಾನಿಯಾಗಿ ಬದುಕಬೇಕು’ ಎಂದರು.

ADVERTISEMENT

ಮುಖ್ಯ ತರಬೇತುದಾರ ಎಚ್.ಎಚ್.ಬೇಪಾರಿ ಮಾತನಾಡಿ, ʼಆಶಾದೀಪ ಸಂಸ್ಥೆಯು ಮಕ್ಕಳ, ಮಹಿಳೆಯರ, ಅಂಗವಿಕಲರ ಹಾಗೂ ವೃದ್ದರ ಏಳ್ಗೆಗಾಗಿ ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳನ್ನು ಮಾಡುತ್ತಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತರಬೇತಿಯಲ್ಲಿ ಪಾಲ್ಗೊಂಡ 25 ಅಂಗವಿಕಲರಿಗೆ ಟ್ರೈನ್‌ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಬಸವರಾಜ ಹುಬ್ಬಳ್ಳಿ ಕಲಿಕಾ ಪರಿಕರಗಳ ಕಿಟ್ ವಿತರಿಸಿದರು. ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಎಂ, ಅಮೃತಾ ಹುಬ್ಬಳ್ಳಿ, ಸಹ ತರಬೇತುದಾರ ಈರಣ್ಣ ಮನ್ನಾಪೂರ, ಅಮಿನಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.