ADVERTISEMENT

ತೇರದಾಳ | ಪೊಲೀಸ್ ಎಂದರೆ ಭಯಬೇಡ: ಅಪ್ಪು ಐಗಳಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 13:40 IST
Last Updated 13 ಜೂನ್ 2024, 13:40 IST
ತೇರದಾಳ ಪೊಲೀಸ್ ಠಾಣೆಯಲ್ಲಿ ನಡೆದ ತೆರೆದ ಬಾಗಿಲು ಕಾರ್ಯಕ್ರಮದ ಅಡಿ ಠಾಣೆಗೆ ಭೇಟಿ ನೀಡಿದ್ದ ಕುರುಹಿನಶೆಟ್ಟಿ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ ಮಕ್ಕಳೊಂದಿಗೆ ಠಾಣಾಧಿಕಾರಿ ಅಪ್ಪು ಐಗಳಿ ಹಾಗೂ ಸಿಬ್ಬಂದಿ ಇದ್ದರು
ತೇರದಾಳ ಪೊಲೀಸ್ ಠಾಣೆಯಲ್ಲಿ ನಡೆದ ತೆರೆದ ಬಾಗಿಲು ಕಾರ್ಯಕ್ರಮದ ಅಡಿ ಠಾಣೆಗೆ ಭೇಟಿ ನೀಡಿದ್ದ ಕುರುಹಿನಶೆಟ್ಟಿ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ ಮಕ್ಕಳೊಂದಿಗೆ ಠಾಣಾಧಿಕಾರಿ ಅಪ್ಪು ಐಗಳಿ ಹಾಗೂ ಸಿಬ್ಬಂದಿ ಇದ್ದರು   

ತೇರದಾಳ: ‘ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಿ, ಕಾನೂನು ಕಾಯ್ದೆಗಳ ಅಡಿ ಕೆಲಸ ಮಾಡುವುದು ಪೊಲೀಸ್ ಇಲಾಖೆಯ ಉದ್ದೇಶವಾಗಿದೆ. ಪೊಲೀಸರು ಎಂದರೆ ಭಯ ಬೇಡ, ನಮ್ಮವರೆಂಬ ಭಾವವಿರಲಿ’ ಎಂದು ಸ್ಥಳೀಯ ಠಾಣಾಧಿಕಾರಿ ಅಪ್ಪು ಐಗಳಿ ಹೇಳಿದರು.

ಗುರುವಾರ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ನಡೆದ ‘ತೆರೆದ ಬಾಗಿಲು ಕಾರ್ಯಕ್ರಮ'ದ ಅಡಿಯಲ್ಲಿ ಕುರುಹಿನಶೆಟ್ಟಿ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು.

‘18 ವರ್ಷ ಪೂರ್ಣಗೊಳ್ಳುವ ಮುನ್ನ ಹಾಗೂ ಪರವಾನಗಿ ಇಲ್ಲದೇ ಯಾರು ಬೈಕ್ ಓಡಿಸಬಾರದು. ಈ ವಯಸ್ಸಿನಲ್ಲಿ ಬೈಕ್ ಓಡಿಸುವುದು ಅಪರಾಧ’ ಎಂದು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು.

ADVERTISEMENT

ಪೋಕ್ಸೊ ಕಾಯ್ದೆ ಕುರಿತು ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿ, ಕೆಲ ಅಂಶಗಳ ಕುರಿತು ಮಾಹಿತಿ ನೀಡಿದರು.

ಉಜ್ವಲ ಭವಿಷ್ಯ ರೂಪಗೊಳ್ಳಲು ಶಿಕ್ಷಣ ಬಹಳಷ್ಟು ಮಹತ್ವದ್ದಾಗಿದೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ. ಬಾಲ್ಯ ವಿವಾಹ ಕುರಿತು ಪಾಲಕರಿಗೆ ಜಾಗೃತಿ ಮೂಡಿಸಿ ಎಂದು ಕಿವಿಮಾತು ಹೇಳಿದರು.

ವಿವೇಕ ಸುರ್ವಖಂಡಿ, ಸವದಿ, ಶಿಕ್ಷಕ ಉಮೇಶ ಕಳಸದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.