ADVERTISEMENT

ಇಳಕಲ್‌: ವಿದ್ಯಾರ್ಥಿಗಳಿಂದ ‘ಮಹಾಚೈತ್ರ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 15:58 IST
Last Updated 20 ಅಕ್ಟೋಬರ್ 2024, 15:58 IST
ಇಳಕಲ್‌ನಲ್ಲಿ ಕೆಬಿಆರ್‌ ಡ್ರಾಮಾ ಕಂಪನಿಯ ರಂಗ ಸಜ್ಜಿಕೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಲಿಂಗಸಗೂರಿನ ಸಂಗಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಎಚ್‌.ಎಸ್‌.ಶಿವಪ್ರಕಾಶರ ʼಮಹಾಚೈತ್ರʼ ನಾಟಕವನ್ನು ಪ್ರದರ್ಶಿಸಿದರು.
ಇಳಕಲ್‌ನಲ್ಲಿ ಕೆಬಿಆರ್‌ ಡ್ರಾಮಾ ಕಂಪನಿಯ ರಂಗ ಸಜ್ಜಿಕೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಲಿಂಗಸಗೂರಿನ ಸಂಗಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಎಚ್‌.ಎಸ್‌.ಶಿವಪ್ರಕಾಶರ ʼಮಹಾಚೈತ್ರʼ ನಾಟಕವನ್ನು ಪ್ರದರ್ಶಿಸಿದರು.   

ಇಳಕಲ್‌: ನಗರದ ಕೆಬಿಆರ್‌ ಡ್ರಾಮಾ ಕಂಪನಿಯ ರಂಗ ಸಜ್ಜಿಕೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಲಿಂಗಸಗೂರಿನ ಸಂಗಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಡಾ.ಪ್ರಭುರಾಜ್‌ ನಿರ್ದೇಶಿಸಿದ ಎಚ್‌.ಎಸ್‌.ಶಿವಪ್ರಕಾಶರ ‘ಮಹಾಚೈತ್ರ’ ನಾಟಕವನ್ನು ಪ್ರದರ್ಶಿಸಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರೊ.ಕೆ.ಎ.ಬನ್ನಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ರಂಗಭೂಮಿಯ ಮೂಲಕ ವೈಚಾರಿಕ ಮನೋಭಾವ, ಕಲೆ-ಸಂಸ್ಕೃತಿಯ ಬಗ್ಗೆ ಆಸಕ್ತಿ ಬೆಳೆಸಲು ನಾಟಕ ಅಕಾಡೆಮಿ ಕಾರ್ಯ ಯೋಜನೆಯೊಂದನ್ನು ರೂಪಿಸಿದೆ. ಆಸಕ್ತ ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡಿ, ನಾಟಕ ಪ್ರದರ್ಶಿಸಲು ನಿರ್ದೇಶಕರೊಬ್ಬರನ್ನು ನಿಯೋಜಿಸಲಾಗುತ್ತದೆ’ ಎಂದರು.

ರಂಗಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ ಮಾತನಾಡಿ, ವಿದ್ಯಾರ್ಥಿಗಳಿಗೆ ರಂಗಭೂಮಿಯ ಬಗ್ಗೆ ಒಲುವು ಬೆಳೆಸಲು ಹಾಗೂ ವ್ಯಕ್ತಿತ್ವ ವಿಕಸನಕ್ಕೆ ನಾಟಕ ಅಕಾಡೆಮಿಯ ಯೋಜನೆ ಸಹಕಾರಿಯಾಗಿದೆ. ಕೇವಲ 10 ದಿನದಲ್ಲಿ ವಿದ್ಯಾರ್ಥಿಗಳನ್ನು ಮಹಾಚೈತ್ರದಂತಹ ರಂಗ ಪ್ರದರ್ಶನಕ್ಕೆ ಸಿದ್ಧಪಡಿಸಿದ ನಿರ್ದೇಶಕ ಡಾ.ಪ್ರಭುರಾಜ್‌ ಅವರ ಪ್ರಯತ್ನ ಶ್ಲಾಘನೀಯವಾದುದುʼ ಎಂದರು.

ADVERTISEMENT

ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಅನ್ನಪೂರ್ಣ ಪಾಟೀಲ ಅವರು ಡೋಲು ಬಾರಿಸುವ ಮೂಲಕ ನಾಟಕ ಪ್ರದರ್ಶನ ಉದ್ಘಾಟಿಸಿದರು. ಬಸವಕೇಂದ್ರದ ಅಧ್ಯಕ್ಷ ಶಿವಾನಂದ ರೂಳಿ ಅಧ್ಯಕ್ಷತೆ ವಹಿಸಿದ್ದರು. ನಾಟಕದ ನಿರ್ದೇಶಕ ಡಾ.ಪ್ರಭುರಾಜ್‌, ಮಹಾಂತೇಶ ವಾಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.