ಮುಧೋಳ: ಪ್ರಸಕ್ತ ವರ್ಷ ಹಿಂಗಾರು, ಮುಂಗಾರು ಹಂಗಾಮಿನಲ್ಲಿ ಮಳೆಯಾಗದೇ ಭೀಕರ ಬರಗಾಲ ಉಂಟಾಗಿದೆ. ಮಳೆಗೆ ಪ್ರಾರ್ಥಿಸಿ ಪೂಜೆ ಪುನಸ್ಕಾರ, ಕತ್ತೆ, ಕಪ್ಪೆಗಳ ಮದುವೆ ಮಾಡಿದರೂ ವರುಣನ ಕೃಪೆಯಾಗದೆ ರೈತರು ಕಂಗಾಲಾಗಿದ್ದಾರೆ.
ಶೇ 40.07 ರಷ್ಟು ಮಳೆಯ ಕೊರತೆ ಉಂಟಾಗಿದೆ. ಅಂತರ ಜಲದ ಮಟ್ಟ ಕುಸಿಯುತ್ತಿದೆ. ತೀವ್ರ ವಿದ್ಯತ್ ಬರದಿಂದ ಲಭ್ಯವಿರುವ ನೀರನ್ನು ಬಳಸಲು ಸಾಧ್ಯವಾಗದೇ ದಿನನಿತ್ಯ ರೈತರು ಹೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿದೆ. ಉಳಿಸಿಕೊಳ್ಳಬಹುದಾದ ಬೆಳೆಗಳು ನಾಶವಾಗುತ್ತಿದೆ.
‘ಗೋವಿನಜೋಳ ಮಳೆಯಾಶ್ರಿತ ತೋಟಗಾರಿಕೆ ಬೆಳೆಗಳು ಶೇ 50 ವಾರ್ಷಿಕ ಬೆಳೆಗಳು ಶೇ 33 ಹಾಗೂ ಇತರೆ ಬಹುವಾರ್ಷಿಕ ಹಣ್ಣಿನ ಬೆಳೆಗಳು ಶೇ 15 ರಿಂದ 20 ರಷ್ಟು ಇಳುವರಿ ಕಡಿಮೆಯಾಗಲಿದೆ’ ಎಂದು ಸಹಾಯಕ ತೋಟಗಾರಿಕೆ ಸಹಾಯಕ ನಿರ್ದೇಶಕ ಮಹೇಶ ದಂಡನ್ನವರ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ 1,221 ಹೆಕ್ಟರ್ ಹಣ್ಣಿನ ಬೆಳೆ, 7650 ಹೇಕ್ಟರ್ ತರ ಕಾರಿ, 1118 ಹೇಕ್ಟರ್ ಸಾಂಬಾರು ಬೆಳೆ ಗಳು, 165 ಹೇಕ್ಟರ್ ವಾಣಿಜ್ಯ ಪುಷ್ಪ ಬೆಳೆಗಳನ್ನು ಬೆಳೆಯನ್ನು ಬೆಳೆಯಲಾಗು ತ್ತಿದೆ.
ತೇವಾಂಶ ಕಡಿಮೆಯಾಗಿರು ವುದರಿಂದ 26,853 ಹೆಕ್ಟರ್ ಕಬ್ಬು ಬೆಳೆ, 4,588 ಗೋವಿನಜೋಳ, 1,402 ಹೆಸರು, 415 ಉದ್ದು, 300 ಸೋಯಾ ಬಿನ್, 102 ಚನ್ನಂಗಿ, 17 ಹೆಕ್ಟೆರ್ ತೊಗರಿ ಬೆಳೆಗಳು ನಾಶವಾಗಿ ಸಾಗುವಳಿ ವೆಚ್ಚ ಒಟ್ಟು ₹ 43,770.39 ಲಕ್ಷ ಹಾನಿ ಯಾಗಿದೆ ಸಹಾಯಕ ಕೃಷಿ ನಿರ್ದೇಶಕ ಬಸವರಾಜ ಮಾಳೇದ ತಿಳಿಸಿದ್ದಾರೆ.
ರೈತರ ಪಂಪ್ ಸೆಟ್ ಗಳಿಗೆ ಸೋಮವಾರದಿಂದ ನಿರಂತರ 5 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಸಂಜೆ 6 ರಿಂದ 10 ವರೆಗೆ ತೋಟದ ಮನೆಗಳಿಗೆ ವಿದ್ಯುತ್ ನೀಡಲಾಗುತ್ತಿದ್ದು, ಈ ಅವಧಿಯಲ್ಲಿ ಕೆಲವು ರೈತರು ಪಂಪ್ ಸೆಟ್ ಆರಂಭಿಸುವುದರಿಂದ ವಿದ್ಯುತ್ ಭಾರ ಹೊಂದಿ ಕೆಲವೊಂದು ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದೆ ಎಂದು ಹೆಸ್ಕಾಂ ಎಇಇ ವೀರಣ್ಣ ಮರಿಕಟ್ಟಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 39,041 ರೈತ ಕುಟುಂಬಗಳಿವೆ, 7845.28 ಹೆಕ್ಟೆರ್ ಕ್ಷೇತ್ರದಲ್ಲಿ 13830 ಅತಿ ಸಣ್ಣ ರೈತರು, 17219.25 ಹೆಕ್ಟೆರ್ ಕ್ಷೇತ್ರದಲ್ಲಿ 11892 ಸಣ್ಣ ರೈತರು ಹಾಗೂ 56404.04 ಹೆಕ್ಟೆರ್ ಕ್ಷೇತ್ರದಲ್ಲಿ 13319 ಅತಿ ದೊಡ್ಡ ರೈತರು ಇದ್ದಾರೆ.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ತಾಲ್ಲೂಕು ಪಂಚಾಯ್ತಿ ಇಒ ಸಂಜೀವ ಹಿಪ್ಪರಗಿ ಹಾಗೂ ನಗರದ 31 ವಾರ್ಡ್‌ಗಳಲ್ಲಿ ಯಾವುದೇ ನೀರಿನ ಸಮಸ್ಯೆ ಸದ್ಯ ಇಲ್ಲ ಎಂದು ನಗರಸಭೆ ಪೌರಾಯುಕ್ತ ಎಸ್.ಜಿ.ಅಂಬಿಗೇರ ತಿಳಿಸಿದ್ದಾರೆ
ತಾಲ್ಲೂಕಿನಲ್ಲಿ ಹೆಚ್ಚು ಕ್ಷೇತ್ರವನ್ನು ಹೊಂದಿರುವ ಗ್ರಾಮಗಳು ಹಲಗಲಿ 2151 ಹೆಕ್ಟೆರ್, ಮುಧೋಳ 3021, ಬೆಳಗಲಿ 2998, ಮಂಟೂರ 2854 ಹೆಕ್ಟೆರ್ ಕ್ಷೇತ್ರವನ್ನು ಹೊಂದಿವೆ.
ಅಸಮರ್ಪಕ ಹಾಗೂ ಕಳಪೆ ವಿದ್ಯುತ್ ಪೂರೈಕೆಯಿಂದ ಪಂಪ್ ಸೆಟ್ ಸುಡುತ್ತಿವೆ. ನಗರ ಪ್ರದೇಶದಂತೆ ನಮಗೂ 24 ಗಂಟೆ ವಿದ್ಯುತ್ ನೀಡಿಚಂದ್ರಕಾಂತ ಹಿತ್ತಲಮನಿ, ಪ್ರಗತಿಪರ ರೈತ, ದಾದನಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.