ADVERTISEMENT

ಸಮೃದ್ಧ ಮಳೆ-ಬೆಳೆ ಕರುಣಿಸು: ಇನಾಮದಾರ ಮೌಲಾನಾ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 16:21 IST
Last Updated 11 ಏಪ್ರಿಲ್ 2024, 16:21 IST
ಮುಧೋಳದ ಹೊರವಲಯದ ಈದ್ಗಾ ಮೈದಾನದಲ್ಲಿ ಈದ್‌ ಉಲ್‌ ಫಿತ್ರ್‌ ವಿಶೇಷ ಪ್ರಾರ್ಥನೆ ನಡೆಯಿತು
ಮುಧೋಳದ ಹೊರವಲಯದ ಈದ್ಗಾ ಮೈದಾನದಲ್ಲಿ ಈದ್‌ ಉಲ್‌ ಫಿತ್ರ್‌ ವಿಶೇಷ ಪ್ರಾರ್ಥನೆ ನಡೆಯಿತು   

ಮುಧೊಳ: ಪ್ರಖರವಾಗಿರುವ ಬಿಸಿಲು ಸಹಿಸಿ ಯಶಸ್ವಿ ಉಪವಾಸ ಮಾಡಿದಂತೆ ನಾಡಿನ ಜನತೆಗೆ ಇಂಥ ಪ್ರಕೃತಿ ವಿಕೋಪ ಸಹಿಸುವ ಶಕ್ತಿ ನೀಡಿ, ಮುಂಬರುವ ದಿನಗಳಲ್ಲಿ ಸಮೃದ್ಧ ಮಳೆ ಬೆಳೆ ನೀಡಿ ನೆಮ್ಮದಿ ಜೀವನ ನಡೆಸಲು ಅಲ್ಲಾಹ ದಯಪಾಲಿಸಲಿ ಎಂದು ಇನಾಮದಾರ ಮೌಲಾನಾ ಪ್ರಾರ್ಥಿಸಿದರು.

ನಗರ ಹೊರವಲಯದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರ ಸಮ್ಮುಖದಲ್ಲಿ ಈದ್-ಉಲ್-ಫೀತ್ರ್‌ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಉದಯ ಸಾರವಾಡ, ದಾನೇಶ ತಡಸಲೂರ, ವಕೀಲ ಪ್ರಕಾಶ, ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ADVERTISEMENT

ಹಸೇನ್ ತುಕ್ಕಾನಟ್ಟಿ, ಅಯೂಬ್, ವಕೀಲ ಐ.ಎಚ್. ಅಂಬಿ, ಐ.ಎಸ್. ಸಾರವಾನ, ವೈ.ಎಂ. ಹುಲಕುಂದ, ಸೈದು ಹುಬಳಿಕರ, ರಾಜು ಬಾಗವಾನ, ಅಂಜುಮನ್ ಅಧ್ಯಕ್ಷ ಆರೀಫ್ ಮೋಮಿನ, ರಫೀಕ್ ಪಠಾಣ, ಸದಸ್ಯರಾದ ಸುಲೇಮಾನ ಅಂಬಿ, ಯುಸೂಫ್ ಜಮಾದಾರ, ಇಬ್ರಾಹಿಂ ಪಠಾಣ, ಯೂನುಸ್ ಕುಡಚಿ, ಖ್ವಾಜಾಅಮೀನ್ ಬಾಗವಾನ, ವಕೀಲ ಬಿಲಾಲ, ಡಾ.ಕರ್ಜಗಿ, ಎಂ.ಡಿ. ಬಾಗವಾನ, ಅಮೀನ ಬೇಪಾರಿ, ಮಹ್ಮದ್ ಶೇಖ, ಸಾಹೇಬಲಾಲ ನದಾಫ್, ಮಿರ್ಜಾ ನಾಯಕವಾಡಿ, ಎಂ.ಆರ್. ಅಮ್ಮಲಜೇರಿ, ಬಾಬುಲಾಲ ಮನಿಯಾರ, ಶಫೀಕ ಬೇಪಾರಿ, ಬಂದು ನಗಾರಚಿ, ಬಿ. ಎಚ್. ಬೀಳಗಿ ಇದ್ದರು.

ಜುಲೂಸ್: ಮಹಾತ್ಮಾ ಗಾಂಧಿ ವೃತ್ತದ ಶಾಹೀ ಮಸ್ಜೀದ್‌ದಿಂದ ನಗರದ ಪ್ರಮುಖ ವೃತ್ತಗಳ ಮೂಲಕ ಈದ್ಗಾ ಮೈದಾನದವರೆಗೆ ಶಾಂತಯುವಾಗಿ ಅಲ್ಲಾಹನನ್ನು ಸ್ಮರಿಸುತ್ತ ಜುಲೂಸ್ (ಜಾಥಾ) ನಡೆಯಿತು.

ಮುಧೋಳದ  ಹೊರವಲಯದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ ಗಣ್ಯರು ಶುಭಕೋರಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ತಮಗೆ ನೀಡಿರುವ ಹಕ್ಕನ್ನು ಮತದಾನ ಮಾಡುವ ಮೂಲಕ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮುಖಂಡರು ಸಭಿಕರಲ್ಲಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.