ADVERTISEMENT

ಸುಳ್ಳು ಆರೋಪ: ನಿರಾಣಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 8:20 IST
Last Updated 1 ಸೆಪ್ಟೆಂಬರ್ 2024, 8:20 IST
<div class="paragraphs"><p>ನಿರಾಣಿ</p></div>

ನಿರಾಣಿ

   

ಬಾಗಲಕೋಟೆ: ‘ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಕುರಿತು ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಹಾನಿಯಾಗುವುದನ್ನು ತಪ್ಪಿಸಿದ್ದೇನೆ’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐದು ನಿಮಿಷದ ಕಿರುಚಿತ್ರ ನಿರ್ಮಿಸಲು ₹4 ಕೋಟಿಗೂ ಹೆಚ್ಚು ಮೊತ್ತ ನೀಡಲು ಅಧಿಕಾರಿಗಳು ಮುಂದಾಗಿದ್ದರು. ನನ್ನ ಗಮನಕ್ಕೆ ಬರುತ್ತಿದ್ದಂತೆಯೇ ಅದನ್ನು ತಡೆದು, ಹಣ ಪಾವತಿಸಿದಂತೆ ಸೂಚಿಸಿದ್ದೆ’ ಎಂದರು.

ADVERTISEMENT

ಹಣ ಪಾವತಿಸದ್ದನ್ನು ಪ್ರಶ್ನಿಸಿ ಬಿಬಿಪಿ ಸ್ಟುಡಿಯೋಸ್‌ ನವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲೂ ನನ್ನ ಹೆಸರು ಉಲ್ಲೇಖಿಸಿಲ್ಲ. ಪೊಲೀಸರಿಂದ, ಕೋರ್ಟ್‌ನಿಂದಲಿ ನೋಟಿಸ್ ಬಂದಿಲ್ಲ. ದಾಖಲೆಯಿಲ್ಲದೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದರು.

‘ಕಾಂಗ್ರೆಸ್‌ ನಾಯಕರ ವಿರುದ್ಧದ ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತ ಗಮನ ಬೇರೆ ಕಡೆಗೆ ಸೆಳೆಯಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ನಿಲ್ಲಿಸಬೇಕು. ರಾಜ್ಯಪಾಲರೇ ನನ್ನ ವಿರುದ್ಧ ಯಾವುದೇ ದೂರಿಲ್ಲ ಎಂದಿದ್ದಾರೆ. ದಾಖಲೆಗಳಿದ್ದರೆ ನೀಡಿ, ಪ್ರಾಸಿಕ್ಯೂಷನ್‌ ಎದುರಿಸಲು ಸಿದ್ದನಿದ್ದೇನೆ’ ಎಂದು ಆಗ್ರಹಿಸಿದರು.

‘ನವನಗರದಲ್ಲಿ ನಾನು ಭೂಮಿ ಪಡೆದಿರುವ ಕುರಿತು ಸಚಿವ ಪಾಟೀಲ ಹೇಳಿದ್ದಾರೆ. ಕೈಗಾರಿಕೆ ಪ್ರದೇಶದಲ್ಲಿ ಶಾಲೆ, ಆಸ್ಪತ್ರೆ ನಿರ್ಮಿಸಲು ಅವಕಾಶವಿದೆ. ಕಾನೂನು ಪ್ರಕಾರ ಶಾಲೆ ನಿರ್ಮಿಸಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.