ADVERTISEMENT

ಜ್ವರ ಬಾಧೆ: ರೋಗಿಗಳಿಂದ ತುಂಬಿದ ಬೀಳಗಿ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 7:15 IST
Last Updated 12 ಜುಲೈ 2024, 7:15 IST
ಬೀಳಗಿ ಸರ್ಕಾರಿ ಆಸ್ಪತ್ರೆಯ ನೊಂದಣಿ ವಿಭಾಗದ ಕೊಠಡಿ ಎದುರು ಸರತಿಸಾಲಿನಲ್ಲಿ ನಿಂತಿದ್ದ ಜನ.
ಬೀಳಗಿ ಸರ್ಕಾರಿ ಆಸ್ಪತ್ರೆಯ ನೊಂದಣಿ ವಿಭಾಗದ ಕೊಠಡಿ ಎದುರು ಸರತಿಸಾಲಿನಲ್ಲಿ ನಿಂತಿದ್ದ ಜನ.   

ಬೀಳಗಿ: ಹವಾಮಾನದ ವೈಪರೀತ್ಯದಿಂದಾಗಿ ಜನರಲ್ಲಿ ಜ್ವರ, ಶೀತ, ಕೆಮ್ಮು, ನೆಗಡಿ, ಹೊಟ್ಟೆ ನೋವು ಮತ್ತು ಮೈಕೈ ನೋವಿನಂಥ ಸಮಸ್ಯೆಗಳು ಕಂಡು ಬರುತ್ತಿದ್ದು ಚಿಕಿತ್ಸೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಮುಗಿ ಬೀಳುತ್ತಿದ್ದಾರೆ.

ಎರಡು ವಾರಗಳಿಂದ ವಾತಾವರಣದಲ್ಲಿ ತಂಪಿನಾಂಶ ಹೆಚ್ಚಾಗಿದ್ದು ತಾಲ್ಲೂಕಿನಾದ್ಯಂತ ನೆಗಡಿಯ ಲಕ್ಷಣ ಗೋಚರಿಸುತ್ತಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಪ್ರತಿದಿನ 700-800 ಜನರು ರೋಗ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣೆಗಾಗಿ ಬರುತ್ತಿದ್ದಾರೆ. ಹೆಚ್ಚಾಗಿ ಮಕ್ಕಳು ಮತ್ತು ವಯಸ್ಸಾದವರಲ್ಲಿ ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿನ ಎಲ್ಲ ಬೆಡ್‍ಗಳು ವಿವಿಧ ರೋಗಿಗಳಿಂದ ತುಂಬಿ ಕೊಂಡಿವೆ.

ದಿನಾಲೂ ನೂರಾರು ರೋಗಿಗಳು ಆಸ್ಪತ್ರೆಗೆ ಬರುವುದರಿಂದ ಎಲ್ಲ ವಿಭಾಗಗಳಲ್ಲಿ ಜನಜಂಗುಳಿ ಉಂಟಾಗುತ್ತಿದೆ. ವೈದ್ಯರ ಪರೀಕ್ಷಾ ಕೊಠಡಿ, ಚುಚ್ಚುಮದ್ದಿನ ಕೊಠಡಿ, ಬಿಪಿ, ಶುಗರ್ ತಪಾಸಣಾ ಕೊಠಡಿ ಮತ್ತು ಔಷಧ ವಿತರಣಾ ಕೊಠಡಿಗಳ ಎದುರು ಜನರು ಸಾಲುಗಟ್ಟಿ ನಿಂತಿರುವ ದೃಶ್ಯ ಪ್ರತಿದಿನ ಕಂಡು ಬರುತ್ತಿದೆ.

ADVERTISEMENT

ಒಂದು ವಾರದಿಂದ ಡೆಂಗಿ ಹಾವಳಿಯೂ ಹೆಚ್ಚಾಗಿದೆ. ಹೀಗಾಗಿ ಸ್ವಲ್ಪ ಜ್ವರ ಬಂದರೆ ಸಾಕು ಜನರು ಭಯ ಬಿದ್ದು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಅಲ್ಲದೇ ಡೆಂಗಿ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿರುವುದರಿಂದ ಜನರು ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ಬರಲು ಪ್ರಮುಖ ಕಾರಣವೂ ಆಗಿದೆ.

ಡೆಂಗಿ ರೋಗದ ಲಕ್ಷಣಗಳು ಅದು ಬರುವ ಕಾರಣಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ

–ಡಾ.ಸಂಜಯ ಯಡಹಳ್ಳಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಬೀಳಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.