ಇಳಕಲ್: ಕೋವಿಡ್ ಜೀವ ಹಾಗೂ ಬದುಕನ್ನು ಕಸಿದುಕೊಂಡಿದೆ. ನಾಟಕದಂತಹ ಪ್ರದರ್ಶನ ಕಲೆಯನ್ನೇ ಅವಲಂಬಿಸಿರುವ ಕಲಾವಿದರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅಜೀಂ ಪ್ರೇಮ್‍ಜಿ ಫೌಂಡೇಷನ್ ಕಲಾವಿದರಿಗೆ ದಿನಸಿ ಕಿಟ್ ವಿತರಿಸಿ ಉತ್ತಮ ಕಾರ್ಯ ಮಾಡಿದೆ ಎಂದು ಸ್ನೇಹರಂಗದ ಅಧ್ಯಕ್ಷ ಬಸವರಾಜ ಮಠದ ಶ್ಲಾಘಿಸಿದರು.
ಗುರುವಾರ ಇಲ್ಲಿಯ ಅನುಭವ ಮಂಟಪದ ಆವರಣದಲ್ಲಿ ಅಜೀಂ ಪ್ರೇಮ್‍ಜಿ ಫೌಂಡೇಷನ್ ನೀಡಿದ ದಿನಸಿ ಕಿಟ್‍ಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜಯ ಮಹಾಂತೇಶ್ವರ ಶ್ರೀಮಠದಲ್ಲಿ ಕಿಟ್‍ಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಗುರುಮಹಾಂತ ಸ್ವಾಮೀಜಿ, ಅಜೀಂ ಪ್ರೇಮ್‍ಜಿ ಅವರು ತಮ್ಮ ಫೌಂಡೇಷನ್ ಮೂಲಕ ಸಾಕಷ್ಟು ದಾನ, ಸೇವಾ ಕಾರ್ಯಗಳನ್ನು ಮಾಡುತ್ತಾರೆ. ಇಳಕಲ್‍ನ ವೃತ್ತಿ ರಂಗಭೂಮಿಯ ಕಲಾವಿದರಿಗೆ ನೆರವು ನೀಡಿದ್ದು, ಇನ್ನಷ್ಟು ದಾನಿಗಳಿಗೆ ಪ್ರೇರಣೆ ನೀಡಲಿದೆ ಎಂದರು.
ಮಹಾಂತೇಶ ಗಜೇಂದ್ರಗಡ, ಫೌಂಡೇಷನ್ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.